ಶಿವಮೊಗ್ಗ: ಭಾರತೀಯ ಅಂಚೆ ಇಲಾಖೆಯ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿವಸ್ ಆಚರಣೆ ಹಮ್ಮಿಕೊಳ್ಳಲಾಗಿದೆ.
8ನೇ ಅಂತರಾಷ್ಟ್ರೀಯ ಯೋಗ ದಿವಸ ಆಚರಣೆಯ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ತನ್ನ ಎಲ್ಲಾ ಪ್ರಧಾನ ಅಂಚೆ ಕಚೇರಿಗಳಲ್ಲಿ ಚಿತ್ರಾತ್ಮಕ ವಿನ್ಯಾಸವುಳ್ಳ ವಿಶೇಷ ಮುದ್ರೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಈ ನಿಟ್ಟಿನಲ್ಲಿ ಶಿವಮೊಗ್ಗ ಅಂಚೆ ವಿಭಾಗದ ಪ್ರಧಾನ ಅಂಚೆ ಕಚೇರಿಗಳಾದ ಶಿವಮೊಗ್ಗ, ಭದ್ರಾವತಿ, ಸಾಗರ ಪ್ರಧಾನ ಅಂಚೆ ಕಚೇರಿಗಳಲ್ಲಿ ಬಿಡುಗಡೆಗೊಂಡ ವಿಶೇಷ ಚಿತ್ರಾತ್ಮಕ ವಿನ್ಯಾಸವುಳ್ಳ ಮುದ್ರೆಗಳನ್ನು ಅಂಚೆ ಕಚೇರಿಗಳ ಟಪಾಲಿನಲ್ಲಿ ರವಾನಿಸುವ ಎಲ್ಲಾ ಟಪಾಲುಗಳ ಮೇಲೆ ಜೂನ್ 21ರಂದು ಮುದ್ರಿಸಲಾಗುವುದು ಎಂದು ಶಿವಮೊಗ್ಗ ವಿಭಾಗದ ಅಧೀಕ್ಷಕ ಎನ್. ರಮೇಶ್ ತಿಳಿಸಿದ್ದಾರೆ.