ಸರ್ಕಾರಿ ನೌಕರಿಯನ್ನು ಗಿಟ್ಟಿಸಿಕೊಳ್ಳಲು ಜನ ಸಾಕಷ್ಟು ಕಸರತ್ತು ಮಾಡುತ್ತಾರೆ. ಸರ್ಕಾರಿ ನೌಕರಿಯಲ್ಲಿ ಇರುವ ಭದ್ರತೆ ಮತ್ತು ಸೌಲಭ್ಯಗಳು ಬೇರೆ ಯಾವ ನೌಕರಿಯಲ್ಲೂ ಸಿಗುವುದಿಲ್ಲ ಎಂಬುದು ಇದಕ್ಕೆ ಕಾರಣವಿರಬಹುದು.
ಹಾಗಾಗಿ ಸರ್ಕಾರಿ ನೌಕರಿ ಸಿಕ್ಕಿತೆಂದರೆ ಅದರಷ್ಟು ಖುಷಿಯ ವಿಷಯ ಇನ್ನೊಂದಿಲ್ಲ. ಆದರೆ ಎಲ್ಲರಿಗೂ ಅದರ ಭಾಗ್ಯ ಸಿಗುವುದಿಲ್ಲ. ಒಬ್ಬ ವ್ಯಕ್ತಿ ತನಗೆ ಮುಂದೆ ಸರ್ಕಾರಿ ನೌಕರಿ ಸಿಗಬಹುದೆಂದು ಊಹೆಯನ್ನೂ ಮಾಡಲಾರ. ಆದರೆ ಹಸ್ತಸಾಮುದ್ರಿಕೆ ಇದರ ಬಗ್ಗೆ ಹೇಳುತ್ತದೆ.
ಗುರು ಪರ್ವತವು, ತೋರು ಬೆರಳಿನ ಕೆಳಗೆ ಇರುತ್ತದೆ. ಗುರು ಪರ್ವತದ ಉದಯವನ್ನು ಶುಭ ಎಂದು ಹೇಳಲಾಗುತ್ತದೆ. ತೋರು ಬೆರಳಿನ ಕೆಳಗೆ ಸ್ಟ್ರೇಟ್ ಲೈನ್ ಇದ್ದರೆ ಆ ವ್ಯಕ್ತಿ ತುಂಬ ಭಾಗ್ಯಶಾಲಿ. ಅಂತವರಿಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಹೆಚ್ಚಿದೆ.
ಉಂಗುರ ಬೆರಳಿನ ಕೆಳಗೆ ಸೂರ್ಯ ಪರ್ವತ ಇರುತ್ತದೆ. ಈ ಭಾಗದಲ್ಲಿರುವ ನಕ್ಷತ್ರದಂತಹ ಗುರುತು ನಿಮಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆಯನ್ನು ತೋರಿಸುತ್ತದೆ. ಸೂರ್ಯ ಪರ್ವತ ನಿಮಗೆ ಸಮಾಜದಲ್ಲಿ ಒಳ್ಳೆಯ ಗೌರವವನ್ನೂ ಕೊಡುತ್ತದೆ.
ಅಂಗೈನ ಭಾಗ್ಯ ರೇಖೆ ಗುರು ಪರ್ವತದವರೆಗೆ ಹೋದರೆ ಆ ವ್ಯಕ್ತಿ ಬಹಳ ಅದೃಷ್ಟವಂತ. ಇಂತವರು ಸರ್ಕಾರಿ ನೌಕರಿ ಪಡೆದು ಉನ್ನತ ಸ್ಥಾನಕ್ಕೆ ಏರುತ್ತಾರೆ.
ಹೆಬ್ಬೆರಳಿನಲ್ಲಿ ಚಕ್ರದ ಗುರುತಿದ್ದರೆ ಅದು ಶುಭದ ಸಂಕೇತ. ಹಸ್ತಸಾಮುದ್ರಿಕೆಯ ಪ್ರಕಾರ, ಚಕ್ರದ ಗುರುತನ್ನು ಹೊಂದಿರುವವರಿಗೆ ಎಲ್ಲ ಕೆಲಸದಲ್ಲೂ ಜಯ ಸಿಗುತ್ತದೆ. ಇದರ ಜೊತೆಗೆ ಕಿರುಬೆರಳಿನ ಕೆಳಗೆ ತ್ರಿಭುಜದ ಚಿಹ್ನೆಯಿದ್ದರೆ ಅವರಿಗೆ ಸರ್ಕಾರಿ ನೌಕರಿ ಸಿಗುತ್ತದೆ.