ಅಂಗಾರಕ ಎಂದರೆ ಮಂಗಳಗ್ರಹ. ಮಂಗಳವಾರದಂದು ಸಂಕಷ್ಟಹರ ಚತುರ್ಥಿ ಬಂದರೆ ಆ ದಿನ ಹೆಚ್ಚು ಶುಭಕರ. ಗಣಪ ಶೀಘ್ರ ಫಲದಾತ. ಹಿಂದೂ ಧರ್ಮದಲ್ಲಿ ಪ್ರಥಮ ಪೂಜೆ ವಿನಾಯಕನಿಗೆ. ವಿನಾಯಕ ಎಲ್ಲಾ ವಯೋಮಾನದವರ ಇಷ್ಟದ ದೇವರು. ಗಣಪನನ್ನು ಒಲಿಸಿಕೊಳ್ಳಲು ಆಡಂಬರ ಬೇಕಿಲ್ಲ. ಸುಲಭವಾಗಿ ಸಿಗುವ ವಸ್ತುಗಳಿಂದ ಗಣಪನನ್ನು ಭಕ್ತಿಯಿಂದ ಆರಾಧಿಸಿದರೆ ಸಾಕು, ನಿಮ್ಮ ಇಷ್ಟಾರ್ಥ ಸಿದ್ದಿಸಿದಂತೆ.
ಅಂಗಾರಕ ಎಂದರೆ ಮಂಗಳ ಎಂದು ಈ ಮೊದಲೇ ಹೇಳಲಾಗಿದೆ. ಮಂಗಳನ ಬಣ್ಣ ಕೆಂಪು. ಹಾಗಾಗಿ ಈ ದಿನ ಸಂಜೆ ಗಣೇಶನ ಪೂಜೆಗೆ ಕೆಂಪು ಬಣ್ಣದ ಹೂಗಳಿಂದ ಗಣೇಶನನ್ನು ಅರ್ಚಿಸಿ.
21ಗಂಟಿನ ಗರಿಕೆ ಹಾರವಂತೂ ಏಕದಂತನಿಗೆ ಬಲು ಪ್ರಿಯ.
ಕಡಲೇಕಾಳನ್ನು ನೆನೆಸಿ ಅದನ್ನು ಪೋಣಿಸಿ, ಮಾಲೆ ತಯಾರಿಸಿ ಗಣಪನಿಗೆ ಅರ್ಪಣೆ ಮಾಡಿ.
ಇದರೊಂದಿಗೆ ಗಣಪತಿಯ ಅಷ್ಟೋತ್ತರವನ್ನು ಭಕ್ತಿಯಿಂದ ಪಠಿಸಿ, ಬೆನಕನ ಮನವನ್ನು ಒಲಿಸಿಕೊಳ್ಳಿ.