ಹವಾಮಾನ ಬದಲಾಗುತ್ತಿದ್ದಂತೆ ತಲೆಹೊಟ್ಟಿನ ಸಮಸ್ಯೆಯೂ ಕಾಡುತ್ತದೆ. ಅದರಲ್ಲೂ ಕಚೇರಿಗೆ ತೆರಳಿ ಎಸಿ ಕೆಳಗೆ ಕೆಲಸ ಮಾಡುವವರ ತಲೆಯಲ್ಲಿ ಡ್ಯಾಂಡ್ರಫ್ ತಪ್ಪುವುದೇ ಇಲ್ಲ. ಕೆಲವು ಮನೆಮದ್ದುಗಳ ಮೂಲಕ ಇದರಿಂದ ಮುಕ್ತಿ ಹೊಂದಬಹುದು.
ಬೇವಿನ ಎಲೆಗಳಿಂದ ತಯಾರಿಸಿ ಪ್ಯಾಕ್ ನಿಮ್ಮ ಸಮಸ್ಯೆ ಬಗೆಹರಿಸಲು ನೆರವಾಗುತ್ತದೆ. ಒಂದು ಮುಷ್ಠಿ ಬೇವಿನ ಎಲೆಗಳನ್ನು ರುಬ್ಬಿ ಪೇಸ್ಟ್ ತಯಾರಿಸಿ. ಅದಕ್ಕೆ ಕಾಲು ಕಪ್ ತೆಂಗಿನ ಹಾಲು ಹಾಗೂ ಬೀಟ್ ರೂಟ್ ಪ್ಯೂರಿ ಸೇರಿಸಿ. ಒಂದೆರಡು ಚಮಚ ತೆಂಗಿನೆಣ್ಣೆ ಬೆರೆಸಿ.
ಈ ಮಿಶ್ರಣವನ್ನು ನಿಮ್ಮ ತಲೆಗೆ ಸಂಪೂರ್ಣವಾಗಿ ಹಚ್ಚಿ. ಇಪ್ಪತ್ತು ನಿಮಿಷಗಳ ಬಳಿ ಶ್ಯಾಂಪೂವಿನಿಂದ ತಲೆ ತೊಳೆಯಿರಿ. ವಾರಕ್ಕೆರಡು ಬಾರಿ ಹೀಗೆ ಮಾಡುವುದರಿಂದ ತಿಂಗಳೊಳಗೆ ನೀವು ಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಹಿಂದಿನ ರಾತ್ರಿ ನೆನೆಹಾಕಿದ ಮೆಂತೆಕಾಳಿಗೆ ಒಂದು ಚಮಚ ವಿನೆಗರ್ ಸೇರಿಸಿ ಬೆಳಿಗ್ಗೆ ರುಬ್ಬಿ. ಬೆಳಿಗ್ಗೆ ಪೇಸ್ಟ್ ತಯಾರಿಸಿ ಹೊಟ್ಟಿರುವ ಜಾಗಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ಸ್ನಾನ ಮಾಡುವುದರಿಂದ ಹೊಟ್ಟು ಹಾಗೂ ಅದರ ಕೆರೆತದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.