ಕೂದಲಿಗೆ ಬಣ್ಣ ಹಚ್ಚಿಕೊಳ್ಳೋದು ಈಗ ಸಾಮಾನ್ಯವಾಗಿಬಿಟ್ಟಿದೆ. ಈಗಿನ ಫ್ಯಾಷನ್ ನಂತೆ ತಿಂಗಳಿಗೊಮ್ಮೆ ಹೇರ್ ಕಲರ್ ಮಾಡುವವರೂ ಇದ್ದಾರೆ. ಬಿಳಿ ಕೂದಲು ಕಾಣದಿರಲಿ ಎನ್ನುವ ಕಾರಣಕ್ಕೆ ಕೆಲವರು ಬಣ್ಣ ಹಚ್ಚಿಕೊಳ್ತಾರೆ. ಆದ್ರೆ ಬಣ್ಣ ಹಚ್ಚಿಕೊಳ್ಳುವ ಮೊದಲು ಕೆಲವೊಂದು ತಪ್ಪುಗಳನ್ನು ಮಾಡ್ತಾರೆ. ಇದ್ರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೂದಲು ಉದುರಲು ಶುರುವಾಗುತ್ತದೆ. ಹಾಗಾಗಿ ಹೇರ್ ಕಲರ್ ಮಾಡುವ ಮೊದಲು ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.
ಕೂದಲಿಗೆ ಬಣ್ಣ ಹಚ್ಚಿಕೊಳ್ಳುವ ಮೊದಲು ಗಿಡಮೂಲಿಕೆಯಿಂದ ಮಾಡಿದ ಬಣ್ಣವನ್ನು ಬಳಸಿ. ಇದ್ರಿಂದ ಕೂದಲಿಗೆ ಯಾವುದೇ ಹಾನಿಯಾಗುವುದಿಲ್ಲ. ಜೊತೆಗೆ ನೈಸರ್ಗಿಕ ಹೊಳಪು ಸಿಗುತ್ತದೆ.
ಕೂದಲಿಗೆ ಬಣ್ಣ ಹಚ್ಚಿಕೊಳ್ಳುವ ಮೊದಲು ಅದ್ರ ಮೇಲಿರುವ ನಿಯಮಗಳನ್ನು ಓದಿ ತಿಳಿದುಕೊಳ್ಳಿ. ಅಲ್ಲಿ ಹೇಳಿದಂತೆ ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಕೂದಲನ್ನು ಸ್ವಚ್ಛಗೊಳಿಸಿ.
ಹೇರ್ ಕಲರ್ ಮಾಡುವ ಹಿಂದಿನ ದಿನ ನೆನಪಿಟ್ಟು ತಲೆ ಕೂದಲಿಗೆ ಎಣ್ಣೆ ಹಚ್ಚಿ. ಹೀಗೆ ಮಾಡಿದಲ್ಲಿ ಕೂದಲು ನಯವಾಗಿ ಹೊಳಪು ಪಡೆಯುತ್ತದೆ.
ಕೂದಲಿಗೆ ಬಣ್ಣ ಬಳಿದ ದಿನ ತಲೆ ಸ್ನಾನಕ್ಕೆ ಕೇವಲ ನೀರನ್ನು ಬಳಸಿ. ಮರೆತೂ ಶ್ಯಾಂಪೂವನ್ನು ಬಳಸಬೇಡಿ.