ಹೆರಿಗೆಯ ನಂತರ ಹೊಟ್ಟೆಯ ಬೊಜ್ಜು ಕರಗಿಸುವುದು ಸವಾಲಿನ ಕೆಲಸವೆನ್ನಬಹುದು. ಎಷ್ಟೇ ವ್ಯಾಯಾಮ ಮಾಡಿದರೂ ಇದು ಕರಗುವುದಿಲ್ಲ. ಇದಕ್ಕಾಗಿ ಇಲ್ಲಿದೆ ಸುಲಭವಾದ ಟಿಪ್ಸ್.
ಅಗಸೆ ಬೀಜದಲ್ಲಿ ಜಾಸ್ತಿ ನಾರಿನ ಅಂಶ ಇರುತ್ತದೆ. ಇದು ಜೀರ್ಣ ಕ್ರಿಯೆಗೆ ಸಹಕಾರಿ. ದೇಹ ತೂಕವನ್ನು ಇಳಿಸಲು ಇದು ಬಹುಮುಖ್ಯ ಪಾತ್ರ ವಹಿಸುತ್ತದೆ. ಜೊತೆಗೆ ಮಲಬದ್ಧತೆಯನ್ನು ಇದು ತಡೆಯುತ್ತದೆ.
ಪ್ರತಿನಿತ್ಯ ಇದನ್ನು ಬಳಸುವುದರಿಂದ ತ್ವಚೆ, ಕಾಂತಿ ಪಡೆದುಕೊಳ್ಳುತ್ತದೆ. ಚರ್ಮಕ್ಕೆ ತುಂಬಾ ಒಳ್ಳೆಯದು. ಎರಡು ಚಮಚ ಅಗಸೆ ಬೀಜಕ್ಕೆ ಎರಡು ಚಮಚ ಜೀರಿಗೆ ಸೇರಿಸಿ. ಸೋಂಪು, ಓಂ ಕಾಳು, ದಾಲ್ಚಿನ್ನಿ ಅಥವಾ ಚಕ್ಕೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ಇದನ್ನು ಮಿಕ್ಸಿಗೆ ಹಾಕಿ ಸಣ್ಣಗೆ ಪುಡಿ ಮಾಡಿಕೊಳ್ಳಿ.
ಒಂದು ಲೋಟದಲ್ಲಿ ಬಿಸಿ ನೀರಿಗೆ ಒಂದು ಚಮಚ ಪುಡಿ ಹಾಕಿ, ನೀರು ತಣ್ಣಗಾದ ಬಳಿಕ ಅರ್ಧ ನಿಂಬೆ ರಸ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಿಗ್ಗೆ ಸೇವಿಸಿ. ಒಂದು ತಿಂಗಳಲ್ಲಿ ಹೊಟ್ಟೆ ಬೊಜ್ಜು ಕರಗುತ್ತದೆ.