ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಿಂದಾಗಿ ನಾವು ದೇಹದ ಪ್ರತಿ ಭಾಗದ ಸುರಕ್ಷತೆಗೆ ವಿಶೇಷ ಗಮನ ಕೊಡುವ ಅಗತ್ಯವಿದೆ. ಅದರಲ್ಲೂ ಹೃದಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಹೃದಯವನ್ನು ರಕ್ಷಿಸಿಕೊಳ್ಳಲು ಹಲವು ಮಾರ್ಗಗಳಿವೆ. ಅವುಗಳ ಪೈಕಿ ಆರೋಗ್ಯಕರ ಆಹಾರವು ಉತ್ತಮ ಮಾರ್ಗವಾಗಿದೆ.
ಕೆಲವೊಂದು ದುರಭ್ಯಾಸಗಳಿಂದಾಗಿ ನಮ್ಮ ಹೃದಯಕ್ಕೆ ಅಪಾಯ ಉಂಟಾಗುತ್ತದೆ. ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳೀಯ ಕಾಯಿಲೆಗಳು ಬರಬಹುದು. ಇವುಗಳನ್ನೆಲ್ಲ ತಡೆಯಲು 5 ಸೂಪರ್ ಫುಡ್‌ಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಇವುಗಳ ಸಹಾಯದಿಂದ ಹೃದಯದ ಆರೋಗ್ಯವನ್ನು ಉತ್ತಮವಾಗಿಡಬಹುದು.
ತರಕಾರಿ– ಸಾಮಾನ್ಯವಾಗಿ ತರಕಾರಿಗಳನ್ನು ಆರೋಗ್ಯಕರ ಆಹಾರ ಎಂದು ಕರೆಯಲಾಗುತ್ತದೆ. ಸೊಪ್ಪು, ಅದರಲ್ಲೂ ವಿಶೇಷವಾಗಿ ಪಾಲಕ್, ಕೇಲ್ ಮತ್ತು ಕೊಲಾರ್ಡ್ ಗ್ರೀನ್ಸ್ ಹೃದಯಕ್ಕೆ ಉತ್ತಮ. ಇವುಗಳಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿವೆ.
ಹಣ್ಣುಗಳು– ಬೆರ್ರಿ ಹಣ್ಣುಗಳು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ.ಸ್ಟ್ರಾಬೆರಿಗಳು, ರಾಸ್ ಬೆರಿ ಮತ್ತು ಬ್ಲೂಬೆರಿಯನ್ನು ನಿಯಮಿತವಾಗಿ ಸೇವನೆ ಮಾಡಿ. ಹೃದಯದ ಆರೋಗ್ಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಬಲ್ಲ ಪೋಷಕಾಂಶಗಳಲ್ಲಿ ಇವು ಸಮೃದ್ಧವಾಗಿವೆ.
ಆಂಥೋಸಯಾನಿನ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ. ಇದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ ಅವಕಾಡೊ ಕೂಡ ಹೃದಯಕ್ಕೆ ಉತ್ತಮವಾದ ಹಣ್ಣು. ಇದು ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೀನ್ಸ್– ನಿರೋಧಕ ಪಿಷ್ಟವು ಬೀನ್ಸ್‌ನಲ್ಲಿ ಕಂಡುಬರುತ್ತದೆ. ಆದ್ದರಿಂದ ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೀನ್ಸ್ ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೃದಯದ ಸ್ಥಿತಿಯನ್ನು ಉತ್ತಮವಾಗಿಡುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಾದಾಮಿ– ಆರೋಗ್ಯಕರ ಹೃದಯಕ್ಕೆ ಬಾದಾಮಿ ಕೂಡ ಅತ್ಯವಶ್ಯ. ಹಲವಾರು ವಿಟಮಿನ್‌ಗಳು ಮತ್ತು ಖನಿಜಗಳನ್ನು ಬಾದಾಮಿ ಒಳಗೊಂಡಿರುತ್ತವೆ. ಇದು ಮೊನೊಸಾಚುರೇಟೆಡ್ ಕೊಬ್ಬು ಮತ್ತು ಫೈಬರ್‌ನ ಸಮೃದ್ಧ ಮೂಲವಾಗಿದೆ. ಹೃದ್ರೋಗವನ್ನು ತಡೆಯಲು ಬಾದಾಮಿ ಸಹಾಯ ಮಾಡುತ್ತದೆ. ಇದಲ್ಲದೇ ಬಾದಾಮಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು.
ಸೀಡ್ಸ್- ಚಿಯಾ ಬೀಜಗಳು ಮತ್ತು ಅಗಸೆ ಬೀಜದಂತಹ ಅನೇಕ ಬಗೆಯ ಸೀಡ್‌ಗಳಲ್ಲಿ ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿವೆ. ಇದು ಹೃದಯದ ಆರೋಗ್ಯಕ್ಕೆ ಪರಿಣಾಮಕಾರಿಯಾಗಿದೆ. ದೈನಂದಿನ ಆಹಾರದಲ್ಲಿ ಅವುಗಳನ್ನು ಸೇವಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ.