ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಿದರೆ ಉತ್ತಮ ಆದಾಯ ನಿಮ್ಮದಾಗುತ್ತದೆ. ಸ್ಥಿರ ಠೇವಣಿಗಳು ಅಥವಾ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹಣ ಹೂಡಿಕೆ ಮಾಡಿದ್ರೆ ಒಳ್ಳೆಯ ರಿಟರ್ನ್ಸ್ ಪಡೆಯಬಹುದು.
ಇವುಗಳಲ್ಲಿ ರಿಸ್ಕ್ ಕೂಡ ಕಡಿಮೆ. ಇದಲ್ಲದೆ ಖಾತರಿಯ ಆದಾಯ ಮತ್ತು ಹೆಚ್ಚಿನ ದರದ ಲಾಭವನ್ನು ನೀಡುವ ಯೋಜನೆ ಎಂದರೆ ಪೋಸ್ಟ್ ಆಫೀಸ್ ನ ಉಳಿತಾಯ ಯೋಜನೆಗಳು.
ಪೋಸ್ಟ್ ಆಫೀಸ್ ನ ಸೇವಿಂಗ್ಸ್ ಸ್ಕೀಮ್ ಗಳು, ಫಿಕ್ಸೆಡ್ ಡೆಪಾಸಿಟ್ ಗಳಿಗಿಂತ್ಲೂ ಹೆಚ್ಚಿನ ಲಾಭವನ್ನು ತಂದುಕೊಡುತ್ತವೆ. ಅತ್ಯಂತ ನಂಬಿಕಸ್ಥ ಯೋಜನೆ ಇದಾಗಿದೆ. ಫಿಕ್ಸೆಡ್ ಡೆಪಾಸಿಟ್ ಗಳನ್ನು ಬ್ಯಾಂಕುಗಳು ಸುರಕ್ಷಿತಗೊಳಿಸಿದ್ದರೂ, ಅವುಗಳ ಬಡ್ಡಿದರ ಮತ್ತು ಟ್ಯಾಕ್ಸ್ ಬೆನಿಫಿಟ್ಸ್ ಪೋಸ್ಟ್ ಆಫೀಸ್ ಸ್ಕೀಮ್ ಗಿಂತ ಉತ್ತಮವಾಗಿಲ್ಲ.
ಇಲ್ಲಿ ನಿಮಗೆ ಶೇ. 5.5ರಿಂದ ಶೇ.7.6ರಷ್ಟು ಬಡ್ಡಿ ಸಿಗುತ್ತದೆ. ಈ ಯೋಜನೆಗಳು ತೆರಿಗೆ ಹೊಣೆಗಾರಿಕೆಯನ್ನು ಸಹ ಕಡಿಮೆ ಮಾಡುತ್ತವೆ. ಲಾಭದಾಯಕ ಹೂಡಿಕೆಗಾಗಿ ಮೂರು ಅತ್ಯುತ್ತಮ ಅಂಚೆ ಕಛೇರಿ ಯೋಜನೆಗಳು ಇಲ್ಲಿವೆ.
ಸುಕನ್ಯ ಸಮೃದ್ಧಿ ಯೋಜನೆ : ಇದು ಹೆಣ್ಣು ಮಗುವಿಗಾಗಿಯೇ ಇರುವ ಯೋಜನೆ. 10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಲ್ಲಿ ಈ ಸ್ಕೀಮ್ ಮಾಡಬಹುದು. ಇಲ್ಲಿ ನಿಮಗೆ ಶೇ.7.6ರಷ್ಟು ಬಡ್ಡಿ ಸಿಗುತ್ತದೆ. 250 ರೂಪಾಯಿಯಿಂದ 1.5 ಲಕ್ಷ ರೂಪಾಯಿ ಹಣವನ್ನು ನೀವು ಠೇವಣಿ ಇಡಬಹುದು. ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ : 60 ವರ್ಷ ವಯಸ್ಸಾದ ಪ್ರತಿಯೊಬ್ಬರೂ ಈ ಯೋಜನೆಯ ಲಾಭ ಪಡೆಯಬಹುದು. ಇಲ್ಲಿ ನಿಮಗೆ ಶೇ.7.4ರಷ್ಟು ಬಡ್ಡಿ ಸಿಗುತ್ತದೆ. ಗರಿಷ್ಠ 15 ಲಕ್ಷ ರೂಪಾಯಿ ಹೂಡಿಕೆ ಮಾಡಲು ಈ ಯೋಜನೆಯಲ್ಲಿ ಅವಕಾಶವಿದೆ.
ಸಾರ್ವಜನಿಕ ಭವಿಷ್ಯ ನಿಧಿ : ಈ ಯೋಜನೆಯಲ್ಲಿ ಕನಿಷ್ಠ 500 ರೂಪಾಯಿಂದ 1.5 ಲಕ್ಷ ರೂಪಾಯಿವರೆಗೂ ಹೂಡಿಕೆ ಮಾಡಬಹುದಾಗಿದೆ. ಶೇ.7.1ರಷ್ಟು ಬಡ್ಡಿ ಸಿಗುತ್ತದೆ. ಖಾತೆ ತೆರೆದ ವರ್ಷವನ್ನು ಬಿಟ್ಟು 15 ವರ್ಷಗಳ ಬಳಿಕ ಇದು ಮೆಚ್ಯೂರಿಟಿ ಹೊಂದುತ್ತದೆ.