
ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಇಂದು ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2015ರಲ್ಲಿ ತೆರೆಕಂಡ ತಮಿಳಿನ ‘ಕೊಹಿನೂರ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ ಶ್ರದ್ಧಾ ಶ್ರೀನಾಥ್ ಅದೇ ವರ್ಷದಲ್ಲಿ ತೆರೆಕಂಡ ಪವನ್ ಕುಮಾರ್ ನಿರ್ದೇಶನದ ‘ಯೂ ಟರ್ನ್’ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.
ನಟಿ ಶ್ರದ್ಧಾ ಶ್ರೀನಾಥ್ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 2021ರಲ್ಲಿ ಬಿಡುಗಡೆಯಾಗಿದ್ದ ಸತೀಶ್ ನೀನಾಸಂ ನಟನೆಯ ‘ಡಿಯರ್ ವಿಕ್ರಂ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಶ್ರದ್ಧಾ ಶ್ರೀನಾಥ್ ಇತ್ತೀಚೆಗೆ ‘ರುದ್ರಪ್ರಯಾಗ್’ ಹಾಗೂ ‘ಕಲಿಯುಗಂ’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಇಂದು ಶ್ರದ್ಧಾ ಶ್ರೀನಾಥ್ ಗೆ ಸ್ಯಾಂಡಲ್ ವುಡ್ ಸೇರಿದಂತೆ ಟಾಲಿವುಡ್ ಹಾಗೂ ಕಾಲಿವುಡ್ ನ ಸಿನಿ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ