![](https://kannadadunia.com/wp-content/uploads/2022/11/50e88f39ca4ae41dc7975086ec1f1e45.jpg)
ಹಾಲಿಗೆ ಖರ್ಜೂರ ಬೆರೆಸಿ ಕುಡಿಯುವುದರಿಂದ ಹತ್ತು ಪಟ್ಟು ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಖರ್ಜೂರದಲ್ಲಿ ಮೊನೊಕ್ಲಾನಲ್ ಎಂಬ ವಿಧದ ಸಕ್ಕರೆ ಇದೆ. ಈ ಸಕ್ಕರೆ ನಮ್ಮ ರಕ್ತದಲ್ಲಿ ಬೆರೆಯಲು ಜೀರ್ಣಗೊಳ್ಳುವ ಅಗತ್ಯವಿಲ್ಲದ ಕಾರಣ ಇದನ್ನು ಸೇವಿಸಿದ ತಕ್ಷಣ ರಕ್ತಕ್ಕೆ ಲಭಿಸುತ್ತದೆ ಮತ್ತು ಅತಿ ಬೇಗ ಮೆದುಳು ಮತ್ತು ದೇಹದ ವಿವಿಧ ಸ್ನಾಯುಗಳಿಗೆ ತಲುಪುತ್ತದೆ.
ಅಲ್ಲದೆ ಖರ್ಜೂರದಲ್ಲಿರುವ ಬೆಪ್ಟಿನ್, ರಕ್ತದಲ್ಲಿರುವ ಕೆಟ್ಟ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಶಕ್ತಿ ಮತ್ತು ಇತರ ಚಟುವಟಿಕೆಗಳು ಹೆಚ್ಚಾಗುತ್ತವೆ. ರಕ್ತನಾಳಗಳು, ಯಕೃತ್, ನರವ್ಯವಸ್ಥೆ, ಕರುಳು ಇತ್ಯಾದಿಗಳ ಕ್ಷಮತೆ ಹೆಚ್ಚಾಗುತ್ತದೆ.
ಈ ಆಹಾರದಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಗಂಧಕ, ಪೊಟ್ಯಾಶಿಯಂ, ಸತು, ಮೆಗ್ನೇಶಿಯಂ, ವಿಟಮಿನ್ ಎ, ಡಿ ಮತ್ತು ವಿಟಮಿನ್ ಸಿ ನಮ್ಮ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ನಿವಾರಿಸಲು ನೆರವಾಗುತ್ತದೆ. ಖರ್ಜೂರದಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುತ್ತದೆ. ಹಾಲುಣಿಸುವ ತಾಯಂದಿರಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸುತ್ತದೆ.