ಹಸುವಿನ ಹಾಲು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದರಲ್ಲಿರುವ ಅಗಾಧ ಪ್ರಮಾಣದ ವಿಟಾಮಿನ್ ಹಾಗೂ ಪೋಷಕಾಂಶಗಳು ದೇಹದಲ್ಲಿ ಶಕ್ತಿಯನ್ನ ಹೆಚ್ಚಿಸುತ್ತವೆ.
ಆದರೆ ಈ ಹಾಲನ್ನ ಕಾಯಿಸುವ ವೇಳೆ ನಾವೆಲ್ಲ ಒಂದು ಸಾಮಾನ್ಯ ತಪ್ಪನ್ನ ಮಾಡುತ್ತೇವೆ. ಇದರಿಂದಾಗಿ ಹಾಲಿನಲ್ಲಿರುವ ಎಲ್ಲಾ ಸತ್ವಗಳು ಮಾಯವಾಗುತ್ತೆ.
ಅನೇಕ ಮಹಿಳೆಯರು ಹಾಲನ್ನ ಪದೇ ಪದೇ ಕಾಯಿಸಿ ಇಡುತ್ತಾರೆ. ಬಹಳ ಹಿಂದಿನಿಂದ ಹಾಲನ್ನ ಕಡಿಮೆ ಉರಿಯಲ್ಲಿ ತುಂಬಾ ಹೊತ್ತು ಕುದಿಸಿದ್ರೆ ಅದು ಹಾಳೇ ಆಗಲ್ಲ ಎಂದು ಇದೇ ಪದ್ಧತಿ ನಡೆದುಕೊಂಡು ಬಂದಿದೆ. ಇನ್ನು ಕೆಲ ಮಹಿಳೆಯರು ಒಳ್ಳೆಯ ಕೆನೆ ಸಿಕ್ಕರೆ ತುಪ್ಪ ಮಾಡೋಕೆ ಅನುಕೂಲವಾಗುತ್ತೆ ಅಂತಾ ಹಾಲನ್ನ ಪದೇ ಪದೇ ಕಾಯಿಸುತ್ತಾರೆ.
ಇನ್ನೂ ಕೆಲವರು ಹಾಲನ್ನ ಪದೇ ಪದೇ ಕಾಯಿಸಿದ್ರೆ ಅದರಲ್ಲಿರುವ ಸತ್ವ ಇನ್ನಷ್ಟು ಹೆಚ್ಚಾಗುತ್ತೆ ಎಂದು ನಂಬಿದ್ದಾರೆ. ಆದರೆ ನೆನಪಿಡಿ ಪದೇ ಪದೇ ಹಾಲನ್ನ ಕಾಯಿಸೋದ್ರಿಂದ ನೀವು ಅದರಲ್ಲಿರುವ ಎಲ್ಲಾ ಪೋಷಕಾಂಶಗಳನ್ನ ನಾಶ ಮಾಡುತ್ತಿದ್ದೀರಿ. ಕೇವಲ ಇದೊಂದು ಮಾತ್ರವಲ್ಲದೇ ನಮಗೆ ಗೊತ್ತಿರದಂತೆ ಹಾಲಿನ ವಿಚಾರದಲ್ಲಿ ನಾವು ಅನೇಕ ತಪ್ಪುಗಳನ್ನ ಮಾಡುತ್ತೇವೆ.
ಹಾಲಿನ ಬಳಕೆ ವಿಚಾರದಲ್ಲಿ ನೀವು ತಿಳಿಯಬೇಕಾದ ಮುಖ್ಯ ಅಂಶಗಳು
1. ಊಟವಾದ ಬಳಿಕ ನೀವು ಹಾಲನ್ನ ಕುಡಿಯುವ ಅಭ್ಯಾಸ ಹೊಂದಿದ್ದರೆ ಅರ್ಧ ಊಟವನ್ನಷ್ಟೇ ಮಾಡಿ. ಇಲ್ಲದೇ ಹೋದಲ್ಲಿ ಜೀರ್ಣ ಕ್ರಿಯೆಯಲ್ಲಿ ತೊಂದರೆ ಉಂಟಾಗಲಿದೆ.
2. ಈರುಳ್ಳಿ ಹಾಗೂ ಬದನೆಕಾಯಿಯ ಜೊತೆ ಎಂದಿಗೂ ಹಾಲನ್ನ ಸೇವಿಸದಿರಿ. ಇದರಿಂದ ಚರ್ಮದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
3. ಮಾಂಸ ಹಾಗೂ ಮೀನಿನ ಜೊತೆ ಎಂದಿಗೂ ಹಾಲನ್ನ ಸೇವಿಸಬೇಡಿ. ಇದರಿಂದ ಚರ್ಮದಲ್ಲಿ ಬಿಳಿ ಕಲೆಗಳು ಉಂಟಾಗಲಿದೆ.
4. ಊಟವಾಗುತ್ತಿದ್ದಂತೆಯೇ ಹಾಲನ್ನ ಎಂದಿಗೂ ಕುಡಿಯಬೇಡಿ.