ಮೊಸರು, ಹಾಲು, ಚೀಸ್‌ನಂತಹ ಡೈರಿ ಉತ್ಪನ್ನಗಳು ಕ್ಯಾಲ್ಷಿಯಂ, ರಂಜಕ ಮತ್ತು ಪ್ರೋಟಿನ್‌ನ ಅತ್ಯುತ್ತಮ ಮೂಲಗಳಾಗಿವೆ. ದಂತ ಮತ್ತು ಹಲ್ಲುಗಳನ್ನು ಬಲವಾಗಿಡಲು ಇದು ಅವಶ್ಯಕ.
ಸ್ಟ್ರಾಬೆರಿ
ಹಲ್ಲುಗಳನ್ನು ಬಿಳುಪುಗೊಳಿಸಲು ಇದು ಅತ್ಯುತ್ತಮ. ಸ್ಟ್ರಾಬೆರಿಗಳು ಮ್ಯಾಲಿಕ್ ಆಸಿಡ್ ಎಂಬ ಕಿಣ್ವವನ್ನು ಹೊಂದಿರುತ್ತವೆ. ಇದು ಹಲ್ಲುಗಳನ್ನು ಬಿಳಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಕಿತ್ತಳೆ ಮತ್ತು ಅನಾನಸ್
ಸಿಟ್ರಿಕ್ ಹಣ್ಣುಗಳಾದ ಕಿತ್ತಳೆ ಮತ್ತು ಅನಾನಸ್ ತಿನ್ನುವುದು ಬಾಯಿಯ ಆರೋಗ್ಯಕ್ಕೆ ಒಳ್ಳೆಯದು. ಈ ಹುಳಿ ಹಣ್ಣುಗಳು ಶುಚಿಗೊಳಿಸುವ ಗುಣಗಳನ್ನು ಹೊಂದಿವೆ ಮತ್ತು ನೈಸರ್ಗಿಕವಾಗಿ ಬಾಯಿಯಿಂದ ಪ್ಲೇಕ್ ಅನ್ನು ತೊಳೆಯುತ್ತದೆ.
ಸೇಬು
ಬಾಯಿಯನ್ನು ಶುದ್ಧೀಕರಿಸುತ್ತದೆ ಮತ್ತು ಹಲ್ಲುಗಳ ನಡುವೆ ಸಿಲುಕಿರುವ ಆಹಾರ ಕಣಗಳನ್ನು ತೊಳೆಯುತ್ತದೆ. ಇದು ಒಸಡುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.