ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಳ್ಳೋದು ಒಂದು ಸಾಮಾನ್ಯ ಸಂಗತಿ. ಅದೊಂದು ಜೀವಿಯಷ್ಟೆ. ಆದ್ರೆ ಮನುಷ್ಯ ಹಾಗೂ ಜೀವಿಗಳು ಪ್ರಕೃತಿಯ ಪ್ರಮುಖ ಭಾಗ. ಹಿಂದೂ ಧರ್ಮದಲ್ಲಿ ಹಲ್ಲಿಯ ಬಗ್ಗೆ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಹಲ್ಲಿ ಎಲ್ಲಿ? ಯಾವಾಗ? ಹೇಗೆ ಕಾಣಿಸಿಕೊಂಡ್ರೆ ಶುಭ ಹಾಗೂ ಯಾವುದು ಅಶುಭ ಎಂಬುದನ್ನು ವಿವರಿಸಲಾಗಿದೆ.
ಗ್ರಂಥಗಳ ಪ್ರಕಾರ ಕೆಲವೊಂದು ನಿರ್ದಿಷ್ಟ ಅವಧಿಯಲ್ಲಿ ಹಲ್ಲಿಗಳು ಕಾಣಿಸಿಕೊಂಡ್ರೆ ಹಾಗೂ ದೇಹದ ಕೆಲ ಭಾಗಗಳಿಗೆ ಹಲ್ಲಿ ತಾಕಿದ್ರೆ ಅದು ಕೆಲವೊಂದು ಮುನ್ಸೂಚನೆಗಳನ್ನು ನೀಡುತ್ತದೆ. ದೀಪಾಳಿಯಂದು ಸಂಜೆ ಮನೆಯಲ್ಲಿ ಹಲ್ಲಿ ಕಂಡ್ರೆ ಅದು ಶುಭ ಸಂಕೇತ. ದೀಪಾವಳಿಯಲ್ಲಿ ಮನೆಗೆ ಬರುವ ಹಲ್ಲಿಯನ್ನು ಲಕ್ಷ್ಮಿ ಎನ್ನಲಾಗುತ್ತದೆ. ಇಡೀ ವರ್ಷ ಮನೆಯಲ್ಲಿ ಸಂತೋಷ-ಸಂಪತ್ತು ನೆಲೆಸುತ್ತದೆಂದು ನಂಬಲಾಗಿದೆ.
ಒಂದು ವೇಳೆ ನಿಮ್ಮ ಮನೆಯಲ್ಲಿ ಹಲ್ಲಿ ಕಂಡರೆ ತಕ್ಷಣ ದೇವಸ್ಥಾನ ಅಥವಾ ಮನೆಯಲ್ಲಿರುವ ಅಕ್ಷತೆಯನ್ನು ತಂದು ಹಲ್ಲಿಗೆ ದೂರದಿಂದಲೇ ಹಾಕಿ. ಮನಸ್ಸಿನಲ್ಲಿ ನಿಮ್ಮ ಆಸೆಯನ್ನು ಹೇಳಿಕೊಳ್ಳಿ. ಹೀಗೆ ಮಾಡಿದ್ರೆ ನಿಮ್ಮ ಮನೋಕಾಮನೆ ಈಡೇರುತ್ತದೆ ಎಂದು ನಂಬಲಾಗಿದೆ.
ಹಲ್ಲಿಯನ್ನು ಪವಿತ್ರ ಪ್ರಾಣಿಯೆಂದು ನಂಬಲಾಗಿದೆ. ಹಾಗೆ ಇದನ್ನು ಆರಾಧಿಸಿದ್ರೆ ಹಣದ ಸಮಸ್ಯೆ ದೂರವಾಗುತ್ತೆ ಎಂದು ನಂಬಲಾಗಿದೆ.