alex Certify ʼಹದಿಹರೆಯʼದ ಹುಡುಗಿಯರಲ್ಲಿ ಕಾಣಿಸಿಕೊಳ್ಳುತ್ತೆ ಈ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹದಿಹರೆಯʼದ ಹುಡುಗಿಯರಲ್ಲಿ ಕಾಣಿಸಿಕೊಳ್ಳುತ್ತೆ ಈ ಬದಲಾವಣೆ

ಹುಡುಗಿಯರು 20 ನೇ ವರ್ಷಕ್ಕೆ ಕಾಲಿಡ್ತಾ ಇದ್ದಂತೆ ಹಾರ್ಮೋನ್ ನಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಇದರಿಂದಾಗಿ ಕೆಲ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸರಿಯಾದ ಸಮಯದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೊದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಷ್ಟ ಎದುರಿಸಬೇಕಾಗುತ್ತದೆ.

ಅನಿಯಮಿತ ಮುಟ್ಟು : ಕೆಲ ಹುಡುಗಿಯರು ಅನಿಯಮಿತ ಮುಟ್ಟಿನ ಸಮಸ್ಯೆ ಎದುರಿಸ್ತಾರೆ. 20 ನೇ ವಯಸ್ಸಿನಲ್ಲಿ ಹಾರ್ಮೋನ್ ಏರುಪೇರಿನಿಂದಾಗಿ ಈ ಬದಲಾವಣೆಯಾಗುತ್ತದೆ. ವಿಟಮಿನ್, ಪ್ರೋಟಿನ್ ಹಾಗೂ ಕಬ್ಬಿಣವುಳ್ಳ ಆಹಾರವನ್ನು ಸೇವನೆ ಮಾಡಿ.

ಮೊಡವೆ : 20 ವರ್ಷ ವಯಸ್ಸಿನ ಹುಡುಗಿಯರಲ್ಲಿ ಮೊಡವೆ ಸಾಮಾನ್ಯ. ಇದರಿಂದ ತಪ್ಪಿಸಿಕೊಳ್ಳಲು ಎಣ್ಣೆಯುಕ್ತ ಆಹಾರ ಹಾಗೂ ಉಪ್ಪಿನಕಾಯಿಯಿಂದ ದೂರವಿರಿ. ಮುಖವನ್ನು ದಿನಕ್ಕೆ 5 ಬಾರಿ ತೊಳೆಯಿರಿ.

ತೂಕ ಹೆಚ್ಚಳ ಅಥವಾ ಇಳಿಕೆ : ಈ ಸಮಯದಲ್ಲಿ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಶುರುವಾಗುತ್ತದೆ. ಹಾಗಾಗಿ 20 ವರ್ಷ ವಯಸ್ಸಿನಲ್ಲಿ ಹುಡುಗಿಯರು ಆಹಾರದ ಜೊತೆಗೆ ವ್ಯಾಯಾಮದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.

ಕೂದಲಿನ ಸಮಸ್ಯೆ : ಹಾರ್ಮೋನ್ ಬದಲಾವಣೆಯಿಂದಾಗಿ ಸೂಕ್ತವಲ್ಲದ ಜಾಗದಲ್ಲಿ ಕೂದಲು ಹುಟ್ಟಿಕೊಳ್ಳುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಮನೆ ಮದ್ದನ್ನು ಉಪಯೋಗಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...