alex Certify ʼಸ್ಯಾನಿಟರಿ ಪ್ಯಾಡ್‌ʼ ಬಳಕೆ ಕುರಿತಂತೆ ಖ್ಯಾತ ಸ್ತ್ರೀರೋಗ ತಜ್ಞರಿಂದ ಮಹತ್ವದ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ಯಾನಿಟರಿ ಪ್ಯಾಡ್‌ʼ ಬಳಕೆ ಕುರಿತಂತೆ ಖ್ಯಾತ ಸ್ತ್ರೀರೋಗ ತಜ್ಞರಿಂದ ಮಹತ್ವದ ಸಲಹೆ

ಮಹಿಳೆಯರು ಬಳಸಿ ಬಿಸಾಡುವ ಸ್ಯಾನಿಟರಿ ಪ್ಯಾಡ್‌ಗಳಿಂದ ಪ್ರಕೃತಿಗೆ ಸಾಕಷ್ಟು ಹಾನಿಯಾಗ್ತಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಸ್ಯಾನಿಟರಿ ಪ್ಯಾಡ್‌ಗಳ ಬದಲು ಮುಟ್ಟಿನ ಕಪ್‌ಗಳನ್ನು ಬಳಸುವಂತೆ ವೈದ್ಯರು ಕೂಡ ಸಲಹೆ ನೀಡ್ತಾರೆ.

ಇದೀಗ  ಇನ್ನರ್ ವೀಲ್ ಕ್ಲಬ್‌ನ ರಾಷ್ಟ್ರೀಯ ಅಧ್ಯಕ್ಷೆ ಡಾ. ಸುರ್ಜಿತ್ ಕೌರ್ ಕೂಡ ಮಹಿಳೆಯರು ಯೂಸ್‌ & ಥ್ರೋ ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯನ್ನು ನಿಲ್ಲಿಸಬೇಕು ಅಂತಾ ಒತ್ತಾಯಿಸಿದ್ದಾರೆ. ಅವುಗಳ ಬದಲು ಮರುಬಳಕೆ ಮಾಡಬಹುದಾದ ಅಥವಾ ಜೈವಿಕ ವಿಘಟನೀಯ ಪ್ಯಾಡ್‌ಗಳನ್ನು ಬಳಸುವುದು ಸೂಕ್ತ ಅಂತಾ ಹೇಳಿದ್ದಾರೆ.

 

ತರಬೇತಿ ಮತ್ತು ವೃತ್ತಿಯಲ್ಲಿ ಡಾ. ಸುರ್ಜಿತ್‌ ಕೌರ್, ಸ್ತ್ರೀರೋಗ ತಜ್ಞರು ಬಳಸಿ ಬಿಸಾಡುವ ನ್ಯಾಪ್‌ಕಿನ್‌ಗಳನ್ನು ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಇದು ವಿಘಟನೆಯಾಗಲು 500-800 ದಿನಗಳೇ ಬೇಕು. ಈ ನ್ಯಾಪ್ಕಿನ್‌ಗಳಿಂದ ಗಾಳಿ, ಮಣ್ಣು ಮತ್ತು ನೀರು ಸಹ ಕಲುಷಿತಗೊಳ್ತಾ ಇದೆ. ಅಂತಿಮವಾಗಿ ಮನುಷ್ಯರಿಗೆ ಹಾನಿ ಮಾಡುತ್ತದೆ ಅನ್ನೋದು ಸುರ್ಜಿತ್‌ ಕೌರ್‌ ಅವರ ಅಭಿಪ್ರಾಯ.

ದಶಕದ ಹಿಂದೆಯೇ ಯುವತಿಯರು ಮತ್ತು ಮಹಿಳೆಯರು ವಿಲೇವಾರಿ ಮಾಡುವ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಲು ಶಿಫಾರಸು ಮಾಡುತ್ತಿದ್ದರು. ಮುಟ್ಟಿನ ನೈರ್ಮಲ್ಯವನ್ನು ಸುಧಾರಿಸಲು ಪರಿಸರ ಸ್ನೇಹಿ ಪ್ಯಾಡ್‌ಗಳನ್ನು ಬಳಸುವಂತೆ ಅವರು ಸಲಹೆ ನೀಡಿದ್ದಾರೆ. ಚೆನ್ನಾಗಿ ತೊಳೆದು  ಮರುಬಳಕೆ ಮಾಡಬಹುದಾದ ಸ್ಯಾನಿಟರಿ ಪ್ಯಾಡ್‌ಗಳು, ಯೂಸ್‌ & ಥ್ರೋ ಪ್ಯಾಡ್‌ಗಳಿಗಿಂತ ಆರೋಗ್ಯಕರವಾಗಿರುತ್ತವೆ. ಇದರ ಜೊತೆಗೆ ಮುಟ್ಟಿನ ಕಪ್‌ಗಳನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಡಾ.ಕೌರ್ ಹೇಳುವ ಪ್ರಕಾರ, ಶಾಲೆಗೆ ಹೋಗುವ ವಿದ್ಯಾರ್ಥಿನಿಯರಿಗೆ ಲಭ್ಯವಿರುವ ಆಯ್ಕೆಗಳನ್ನು ಒದಗಿಸುವುದು ಬಹಳ ಮುಖ್ಯ. ತಾಯಂದಿರು ಅವರ ಮಾರ್ಗದರ್ಶಕರು, ಆಧುನಿಕ ಪರ್ಯಾಯಗಳ ಬಗ್ಗೆ ಅವರಿಗೆ ತಿಳಿದಿಲ್ಲ. ಸರ್ಕಾರಗಳು ಹದಿಹರೆಯದ ಹೆಣ್ಣುಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಂತೆ, ಋತುಬಂಧದ ನಂತರದ ಮಹಿಳೆಯರಿಗಾಗಿಯೂ ಅನುಕೂಲ ಮಾಡಿಕೊಡಬೇಕು ಎಂದು ಕೌರ್‌ ಒತ್ತಾಯಿಸಿದ್ದಾರೆ.

ಹೆಚ್ಚಿನ ಭಾರತೀಯ ಮಹಿಳೆಯರು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಅನ್ನೋದು ಅವರ ಅಭಿಪ್ರಾಯ. ಶೇ.80ರಷ್ಟು ಭಾರತೀಯ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆಯಿದೆ. ನಮ್ಮ ದೇಶದಲ್ಲಿ ಸೂರ್ಯನ ಬೆಳಕು ಅಪಾರವಾಗಿದ್ದರೂ ನಾವು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದೇವೆ. ವಯಸ್ಸಾದವರು ಸೂರ್ಯನ ಬೆಳಕಿಗೆ ಸಾಕಷ್ಟು ಒಡ್ಡಿಕೊಳ್ಳುವುದಿಲ್ಲ. ಯಾಕಂದ್ರೆ ಅವರು ಹೆಚ್ಚಾಗಿ ಮನೆಯೊಳಗೆ ಉಳಿಯುತ್ತಾರೆ, ಕಿರಿಯರು ಸನ್‌ಸ್ಕ್ರೀನ್‌ಗಳನ್ನು ಹಚ್ಚಿಕೊಳ್ತಾರೆ ಅಂತಾ ಸುರ್ಜಿತ್‌ ಕೌರ್‌ ಹೇಳಿದ್ದಾರೆ. 30 ವರ್ಷಗಳ ನಂತರ ಮೂಳೆಗಳು ದುರ್ಬಲಗೊಳ್ಳುವ ಆಸ್ಟಿಯೊಪೊರೋಸಿಸ್ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...