ನೀವು ಜಿಮ್ ಗೆ ಹೋಗುತ್ತಿದ್ದೀರಾ…? ಬಹು ಬೇಗ ಸಿಕ್ಸ್ ಪ್ಯಾಕ್ ಬರಿಸಿಕೊಳ್ಳುವ ಬಯಕೆ ಇದೆಯೇ…? ಹಾಗೆಂದು ಒಮ್ಮೆಲೇ ಸ್ಟಿರಾಯ್ಡ್ ಸೇವನೆ ಆರಂಭಿಸಿದ್ದೀರಾ…? ಇದರಿಂದಾಗುವ ಕೆಡುಕುಗಳ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.
ಸತತವಾಗಿ ಸ್ಟಿರಾಯ್ಡ್ ಗಳನ್ನು ಬಳಸುವುದರಿಂದ ನಿರ್ದಿಷ್ಟ ಭಾಗದ ಚರ್ಮ ತೆಳುವಾಗಿ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಚರ್ಮದ ಸೋಂಕನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಚರ್ಮದ ಪದರಗಳಲ್ಲಿರುವ ಕಿರುಚೀಲಗಳು ಉಬ್ಬಿಕೊಳ್ಳಲು ಕಾರಣವಾಗಬಹುದು.
ಇದರ ನಿರಂತರ ಸೇವನೆಯಿಂದ ಚರ್ಮದ ಅಲರ್ಜಿ ಉಂಟಾಗಬಹುದು. ಅಧಿಕ ಬಳಕೆಯಿಂದ ಮೊಡವೆಗಳು ಹೆಚ್ಚಬಹುದು. ಚರ್ಮದ ಬಣ್ಣ ಬದಲಾವಣೆ ಅಗುವುದರೊಂದಿಗೆ ಅಲ್ಲಲ್ಲಿ ಕಪ್ಪು ತೇಪೆಗಳು ಮೂಡಿಕೊಂಡಾವು. ನಿಮಗೆ ಇದು ತಕ್ಷಣಕ್ಕೆ ಅತ್ಯುತ್ತಮ ಫಲಿತಾಂಶ ಸಿಕ್ಕಿದರೂ ದೀರ್ಘ ಕಾಲದ ಅಡ್ಡ ಪರಿಣಾಮ ಬೀರುತ್ತದೆ. ಹೀಗಾಗಿ ನಿಮ್ಮ ವೈದ್ಯರ ಸಲಹೆ ಪಡೆಯದೆ ಯಾವುದೇ ಸ್ಟಿರಾಯ್ಡ್ ಗಳನ್ನು ಸೇವಿಸದಿರಿ.