ಬಿಸಿಲು, ಚಳಿ, ಮಳೆಯಿಂದ ಹಾಗೂ ವಾಹನದ ಹೊಗೆ, ಧೂಳು ಇವುಗಳಿಂದ ತ್ವಚೆಯು ಕಳೆಗುಂದುತ್ತದೆ. ಕ್ಲೆನ್ಸಿಂಗ್ ಮಾಡುವುದರಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ ಹೋಗಬೇಕೆಂದಿಲ್ಲ. ಮನೆಯಲ್ಲೇ ದೊರೆಯುವ ಸಾಮಗ್ರಿಗಳಿಂದ ಕ್ಲೆನ್ಸಿಂಗ್ ಮಾಡಿಕೊಳ್ಳಬಹುದು.
ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್ ಅನ್ನು ಗಂಟಿಲ್ಲದಂತೆ ಕಲೆಸಿ ತೆಳ್ಳಗೆ ಮಾಡಿ ಮುಖ, ಕತ್ತಿನ ಭಾಗಕ್ಕೆ ಹಚ್ಚಿ. ಒಣಗಿದ ನಂತರ ತಣ್ಣೀರಿನಲ್ಲಿ ಸ್ವಚ್ಚ ಮಾಡಿಸಿಕೊಂಡರೆ ತ್ವಚೆ ಹೊಳೆಯುತ್ತದೆ.
ಟೊಮಾಟೊ ಹಣ್ಣಿನ ರಸ, ಮೊಸರಿನ ಮಿಶ್ರಣವನ್ನು ಚರ್ಮದ ಮೇಲೆ ಮಾಲಿಶ್ ಮಾಡಿ, ಒಣಗಲು ಬಿಡಿ. ನಂತರ ತಣ್ಣೀರಿನಲ್ಲಿ ತೊಳೆದರೆ ತ್ವಚೆ ಸ್ವಚ್ಚವಾಗಿ ಹೊಳೆಯುತ್ತದೆ.
ಹಾಲಿನ ಕೆನೆಗೆ ಚಿಟಕಿ ಅರಿಶಿಣ ಸೇರಿಸಿ ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಕಡಲೆಹಿಟ್ಟು ಬಳಸಿ ತೊಳೆದುಕೊಳ್ಳುವುದರಿಂದ ಚರ್ಮ ತಿಳಿಯಾಗುತ್ತದೆ.
ಬಾದಾಮಿ ಪುಡಿ, ಹಾಲು ಮತ್ತು ಮುಲ್ತಾನಿ ಮಿಟ್ಟಿಯನ್ನು ಹಚ್ಚಿ 10 ನಿಮಿಷದ ಬಳಿಕ ತೊಳೆದುಕೊಂಡರೆ ಚರ್ಮದ ಕಾಂತಿಯು ಹೆಚ್ಚುವುದು.
ರುಬ್ಬಿದ ಮೆಂತೆ, ತೆಂಗಿನಹಾಲು, ಲಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿಕೊಂಡು ಸ್ವಚ್ಚಗೊಳಿಸಿದರೆ ಚರ್ಮ ಹೊಳಪನ್ನು ಪಡೆಯುತ್ತದೆ.