ವೀಳ್ಯದೆಲೆ ಹಲವಾರು ಔಷಧಿ ಗುಣಗಳನ್ನು ಹೊಂದಿದೆ. ಚರ್ಮದ ಕಾಂತಿಯನ್ನು ಈ ವೀಳ್ಯದೆಲೆ ಹೆಚ್ಚಿಸುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ಸತ್ತ ಜೀವಕೋಶಗಳನ್ನು ತೆಗೆದು ಹಾಕಿ ಚರ್ಮಕ್ಕೆ ಕಾಂತಿ ಕೊಡುತ್ತವೆ.
ವೀಳ್ಯದೆಲೆಯನ್ನು ಸ್ವಚ್ಚವಾಗಿ ತೊಳೆದು ಸಣ್ಣಗೆ ರುಬ್ಬಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ. ಫೇಸ್ ಪ್ಯಾಕ್ ತಯಾರಿಸಿ.
ಇದನ್ನು ಮುಖಕ್ಕೆ ಹಚ್ಚಿ. ನಂತರ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ವಾರದಲ್ಲಿ ಎರಡು ಬಾರಿ ನಿರಂತರವಾಗಿ ಹೀಗೆ ಮಾಡಿ ನೋಡಿ. ಚರ್ಮ ಮೃದುವಾಗಿ ಚರ್ಮ ಕಾಂತಿ ಪಡೆಯುತ್ತದೆ.
ವೀಳ್ಯದೆಲೆಯನ್ನು ಕುದಿಸಿದ ನೀರಿನಿಂದ ಮುಖ ತೊಳೆದುಕೊಳ್ಳಿ. ಇದರಿಂದ ನಿಮ್ಮ ಮುಖ ಬೆಳ್ಳಗಾಗುತ್ತದೆ. ವಾರಕ್ಕೊಮ್ಮೆ ಇದನ್ನು ಪುನರಾವರ್ತಿಸಿ.
ಸುಟ್ಟ ಗಾಯಕ್ಕೆ ಹೇಳಿ ಮಾಡಿಸಿದ ಔಷಧಿ ಈ ವೀಳ್ಯದೆಲೆ. ಇದನ್ನು ಸಣ್ಣಗೆ ರುಬ್ಬಿ ಜೇನುತುಪ್ಪ ಬೆರಸಿ ಸುಟ್ಟ ಜಾಗಕ್ಕೆ ಹಚ್ಚಿ. ಇದರಿಂದ ಸುಟ್ಟ ಉರಿ ಕಡಿಮೆಯಾಗಿ ಹಿತವೆನಿಸುತ್ತದೆ.