alex Certify ʼಸೌಂದರ್ಯʼವರ್ಧಕವಾಗಿ ಆಲೂಗಡ್ಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೌಂದರ್ಯʼವರ್ಧಕವಾಗಿ ಆಲೂಗಡ್ಡೆ

ಆಲೂಗಡ್ಡೆಯಿಂದ ದೂರ ಉಳಿಯುವವರೇ ಜಾಸ್ತಿ. ಇದು ಕೊಬ್ಬು ಹೆಚ್ಚಿಸುವುದರಿಂದ ದಪ್ಪವಾಗ್ತಿವೆಂಬ ಭಯ. ಆದರೆ ಆಲೂಗಡ್ಡೆಯಿಂದ ಅನೇಕ ಉಪಯೋಗಗಳಿವೆ. ಇದನ್ನು ಕೇಳಿದ್ರೆ ನೀವು ಆಲೂಗಡ್ಡೆ ಬಳಕೆಯನ್ನು ಜಾಸ್ತಿ ಮಾಡ್ತೀರಾ.

ಆಲೂಗಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ರಂಜಕ ಗಮನಾರ್ಹ ಪ್ರಮಾಣದಲ್ಲಿ ಕಂಡು ಬರುತ್ತವೆ.

ಚರ್ಮದ ಬಣ್ಣ : ಹೊಳೆಯುವ ಚರ್ಮ ಪಡೆಯಲು ಆಲೂಗಡ್ಡೆ ಅತೀ ಮುಖ್ಯ. ಆಲೂಗಡ್ಡೆಯನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮ ಹೊಳಪು ಪಡೆಯುತ್ತದೆ. ಅಲ್ಲದೇ ಮುಖದಲ್ಲಿ ತುರಿಕೆ ಇದ್ದರೆ ಅದೂ ಕಡಿಮೆಯಾಗುತ್ತದೆ. 30 ನಿಮಿಷಗಳ ಕಾಲ ಮುಖಕ್ಕೆ ಆಲೂಗಡ್ಡೆ ಮಿಶ್ರಣವನ್ನು ಹಚ್ಚಿಡಬೇಕು. ಇದಕ್ಕೆ ಲಿಂಬು ರಸ ಬೆರೆಸಿದರೆ ಮತ್ತೂ ಉತ್ತಮ.

ಸುಕ್ಕು ತಡೆಯುತ್ತದೆ : ಮುಖ ಸುಕ್ಕುಗಟ್ಟುವುದನ್ನು ಆಲೂಗಡ್ಡೆ ತಡೆಯುತ್ತದೆ. ಸುಕ್ಕು ತಡೆಯುವ ಹಾಗೂ ಚರ್ಮವನ್ನು ಮೃದುಗೊಳಿಸುವ ಗುಣಗಳು ಇದರಲ್ಲಿದೆ.

ಕಪ್ಪು ಕಲೆ : ಕಣ್ಣುಗಳ ಕೆಳಗಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಆಲೂಗಡ್ಡೆ ಉತ್ತಮ ಔಷಧಿ. ಆಲೂಗಡ್ಡೆಯ ರಸವನ್ನು ಕಣ್ಣಿನ ಕೆಳಗೆ ಹಚ್ಚಿ, ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ.

ಸನ್ ಬರ್ನ್ : ಸೂರ್ಯನ ಶಾಖದಿಂದ ಕಪ್ಪಾಗುವ ಮುಖವನ್ನು ಸುಂದರಗೊಳಿಸಲು ಆಲೂಗಡ್ಡೆ ಬಳಸುವುದು ಬಹಳ ಉಪಯೋಗಕಾರಿ. ಮೊದಲು ಆಲೂಗಡ್ಡೆಯನ್ನು ಹೋಳುಗಳಾಗಿ ಮಾಡಿ ಫ್ರಿಜ್ ನಲ್ಲಿಡಿ. ತಣ್ಣಗಾದ ಆಲೂಗಡ್ಡೆಯನ್ನು ಕಪ್ಪಾದ ಜಾಗದಲ್ಲಿ ಇಟ್ಟುಕೊಳ್ಳಿ. ಇದರಿಂದ ಮುಖ ಶುದ್ಧವಾಗುವುದಲ್ಲದೇ, ನಯವಾಗಿ, ಮೃದುವಾಗುತ್ತದೆ ಚರ್ಮ.

ಒಣ ಚರ್ಮ : ಒಣ ಚರ್ಮ ಹೊಂದಿದವರು ಆಲೂಗಡ್ಡೆ ರಸವನ್ನು ಮೊಸರಿನಲ್ಲಿ ಕಲಸಿ, ಮುಖಕ್ಕೆ ಪ್ಯಾಕ್ ಮಾಡಿಕೊಳ್ಳಿ. ಸುಮಾರು 20 ನಿಮಿಷಗಳ ಕಾಲ ಮುಖದ ಮೇಲೆ ಪ್ಯಾಕ್ ಇಟ್ಟುಕೊಂಡು ನಂತರ ತೊಳೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...