ಧಾವಂತದ ಬದುಕಿನಲ್ಲಿ ಎಷ್ಟೋ ಬಾರಿ ನಾವು ಸೌಂದರ್ಯದ ಬಗ್ಗೆ ಕಾಳಜಿ ಮಾಡುವುದನ್ನು ಮರೆತೇ ಬಿಟ್ಟಿರುತ್ತೇವೆ. ಅಡುಗೆ ಮನೆಯಲ್ಲೇ ಸಿಗುವ ಅಗ್ಗದ ವಸ್ತುಗಳಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಮರೆತೇ ಬಿಟ್ಟಿರುತ್ತೇವೆ.
ಎರಡು ಚಮಚ ಅಕ್ಕಿಯನ್ನು ನೀರಿನಲ್ಲಿ ತೊಳೆದು ರಾತ್ರಿಯೇ ನೆನೆಸಿಡಿ. ಮರುದಿನ ಅದಕ್ಕೆ ಒಂದು ಗ್ಲಾಸ್ ನೀರು ಹಾಕಿ ಎರಡು ಚಮಚ ಹಾಲು ಬೆರೆಸಿ. ಅಲೋವೇರಾ ತುಂಡುಗಳನ್ನು ಸೇರಿಸಿ 15 ನಿಮಿಷ ಸಣ್ಣ ಉರಿಯಲ್ಲಿಟ್ಟು ಕುದಿಸಿ. ಬೆಂದ ಬಳಿಕ ರಸ ಸೋಸಿ. ಅದಕ್ಕೆ ಎರಡು ಚಮಚ ಗುಲಾಬಿ ನೀರು ಬೆರೆಸಿ. ಅರ್ಧ ಚಮಚ ತೆಂಗಿನ ಎಣ್ಣೆ, ಅರ್ಧ ಚಮಚ ಅಲಿವ್ ಎಣ್ಣೆ ಹಾಗೂ ಗ್ಲಿಸರಿನ್ ಬೆರೆಸಿ. ಕೊನೆಗೆ ಒಂದು ಚಮಚ ಅಲೋವೇರಾ ಜೆಲ್ ಹಾಕಿ.
ಮೊದಲು ಇದನ್ನು ನಿಮ್ಮ ಕೈಗಳ ಮೇಲೆ ಹಚ್ಚಿ ನೋಡಿ. ಅಲರ್ಜಿಯ ಯಾವ ಲಕ್ಷಣಗಳೂ ಕಾಣದಿದ್ದರೆ ಮುಖಕ್ಕೆ ಮೃದುವಾಗಿ ಹಚ್ಚಿ. ಇದರಿಂದ ಮುಖದ ಮೇಲೆ ಉಂಟಾದ ಸುಕ್ಕು, ನೆರಿಗೆ ಎಲ್ಲವೂ ಮಾಯ. ಅನ್ನ ಹಾಗೂ ಹಾಲಿನಿಂದ ತಯಾರಾದ ಈ ಕ್ರೀಮ್ ಬಿಸಿಲಿಗೆ ಉಂಟಾದ ತ್ವಚೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.