ಹಸಿರು ಬಣ್ಣದೊಂದಿಗೆ ಆಕರ್ಷಕವಾಗಿ ಕಾಣುವ ಸೋರೆಕಾಯಿಯಿಂದ ಹಲವಾರು ಆರೋಗ್ಯದ ಪ್ರಯೋಜನಗಳಿವೆ. ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಹಲವು ರೋಗಗಳನ್ನು ತಡೆಗಟ್ಟಬಹುದು.
ಪ್ರತಿ ದಿನ ಬೆಳಿಗ್ಗೆ ಸೋರೆಕಾಯಿಗೆ ಜೀರಿಗೆ ಉಪ್ಪು ಬೆರೆಸಿ ರುಬ್ಬಿ ಕುಡಿಯುವುದರಿಂದ ದಿನವಿಡೀ ಫ್ರೆಶ್ ಆಗಿ ಇರಬಹುದು.
ಮಧುಮೇಹಿಗಳು ದಿನಂಪ್ರತಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು.
ವಾಂತಿ – ಭೇದಿ ಆದಾಗ ಇದರ ಜ್ಯೂಸ್ ಕುಡಿಯುವುದರಿಂದ ದೇಹ ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸಬಹುದು. ಇದನ್ನು ಮೊಸರಿನೊಂದಿಗೆ ಸೇವಿಸುವುದರಿಂದ ಅತಿಸಾರ ಕಡಿಮೆಯಾಗುತ್ತದೆ.
ದೇಹಕ್ಕೆ ಶಕ್ತಿ ನೀಡುವ ಇದು ಉಷ್ಣ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೆಚ್ಚಿನ ಪ್ರಮಾಣದ ನಾರಿನಂಶ ಹೊಂದಿರುವ ಇದರ ಸೇವನೆಯಿಂದ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ.