alex Certify ʼಸೋಮವಾರʼ ದ ಕುರಿತು ಬೇಸರ ಹೊಂದಿರುವ ಉದ್ಯೋಗಿಗಳಿಗೆ ಇಲ್ಲಿದೆ ಸಮಾಧಾನಕಾರ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೋಮವಾರʼ ದ ಕುರಿತು ಬೇಸರ ಹೊಂದಿರುವ ಉದ್ಯೋಗಿಗಳಿಗೆ ಇಲ್ಲಿದೆ ಸಮಾಧಾನಕಾರ ಸಂಗತಿ

ನ್ಯೂಯಾರ್ಕ್​: ಶನಿವಾರ ಮತ್ತು ಭಾನುವಾರ ಬಹುತೇಕ ಮಂದಿಗೆ ವಾರದ ರಜೆ. ಇದು ಮುಗಿದು ಸೋಮವಾರ ಬಂತೆಂದರೆ ಅನೇಕರಿಗೆ ತುಂಬಾ ಬೇಸರ. ಸೋಮವಾರ ಯಾಕಾದರೂ ಬರುತ್ತೋ ಎಂದು ಶಪಿಸುವವರೇ ಹಲವರು.

ಆದರೆ ಇದೀಗ ಅಚ್ಚರಿ ಎನ್ನುವಂತೆ ಸೋಮವಾರವು ವಾರದ ಕೆಟ್ಟ ದಿನ ಎಂದು ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಅಧಿಕೃತವಾಗಿ ಘೋಷಿಸಿದೆ !

ಗಿನ್ನೆಸ್ ವರ್ಲ್ಡ್‌ ರೆಕಾರ್ಡ್ ಟ್ವೀಟ್ ಮಾಡಿ, ವಾರದ ಅತ್ಯಂತ ಕೆಟ್ಟ ದಿನದ ದಾಖಲೆಯನ್ನು ನಾವು ಸೋಮವಾರ ಅಧಿಕೃತವಾಗಿ ನೀಡುತ್ತಿದ್ದೇವೆ ಎಂದು ತಿಳಿಸಿದೆ. ಬಹಳಷ್ಟು ಜನರಿಗೆ ಸೋಮವಾರವು ನೀರಸ ದಿನವಾಗಿದೆ ಎಂದು ಹೇಳಿದೆ.

ಈ ಪೋಸ್ಟ್‌ನ್ನು 7 ಲಕ್ಷಕ್ಕೂ ಅಧಿಕ ಜನರು ಲೈಕ್ ಹಾಗೂ ಕಮೆಂಟ್ ಮಾಡಿದ್ದು, ನೆಟ್ಟಿಗರು ವಿಭಿನ್ನ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಏನಾದರೂ ಹೊಸ ಕೆಲಸ ಆರಂಭಿಸಲು, ವಿಶೇಷ ಯೋಜನೆ ಹಮ್ಮಿಕೊಳ್ಳಲು ಅಥವಾ ಯಾವುದೇ ಶುಭಾರಂಭಕ್ಕೆ ಸೋಮವಾರ ಸೂಕ್ತ ದಿನವಲ್ಲ. ಅಕಸ್ಮಾತ್​ ಮುಂದುವರಿದರೆ ಖಂಡಿತವಾಗಿಯೂ ಏಳ್ಗೆ ಸಾಧ್ಯವಾಗದು ಎಂದು ಓರ್ವ ಕಮೆಂಟಿಗ ಹೇಳಿದ್ದರೆ, ಈ ಕಾರಣಕ್ಕಾಗಿಯೇ ನಾನು ಸೋಮವಾರ ರಜೆ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾನೆ.‌

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...