ಸೊಳ್ಳೆ ಕಾಟದಿಂದ ತಪ್ಪಿಸಿಕೊಂಡವರು ಯಾರಿದ್ದಾರೆ ಹೇಳಿ..? ಯಾವ ಗುಡ್ ನೈಟ್, ಮಸ್ಕಿಟೋ ಕಾಯಿಲ್ ಗಳೂ ಕೂಡ ಸಂಪೂರ್ಣವಾಗಿ ಸೊಳ್ಳೆ ನಿರ್ನಾಮ ಮಾಡಲ್ಲ. ಕೆಲವೊಮ್ಮೆ ಪಕ್ಕದಲ್ಲಿರುವವರಿಗಿಂತ ನಮಗೇ ಬಂದು ಬಂದು ಕಚ್ಚುತ್ತೆ. ಹೀಗೆ ಸೊಳ್ಳೆ ನಿಮ್ಮನ್ನೇ ಬಂದು ಕಚ್ಚೋಕೆ ಕಾರಣಗಳಿವೆ.
ನಿಮ್ಮ ರಕ್ತದ ಗುಂಪು ಓ ಆಗಿದ್ದರೆ ಸೊಳ್ಳೆ ಖಂಡಿತಾ ನಿಮ್ಮನ್ನೇ ಹುಡುಕಿಕೊಂಡು ಬರುತ್ತೆ. ಈ ರಕ್ತದ ಗುಂಪು ಸೊಳ್ಳೆಗಳನ್ನು ಸೆಳೆಯುತ್ತಂತೆ. ಇದಾದ ನಂತರದ್ದು ಬಿ ಬ್ಲಡ್ ಗ್ರೂಪ್.
ನಿಮ್ಮ ಬೆವರು ಗ್ರಂಥಿಗಳಲ್ಲಿ ಲಾಕ್ಟಿಕ್ ಆಸಿಡ್ ಇದ್ದಲ್ಲಿ ಆ ಸಿಹಿ ಅಂಶ ಸೊಳ್ಳೆಗಳನ್ನು ತನ್ನತ್ತ ಸೆಳೆಯುತ್ತದೆ. ನೀವು ವರ್ಕೌಟ್ ಮಾಡಿ ಬಂದಾಗ ನಿಮ್ಮ ಬೆವರಿನಲ್ಲಿ ಈ ಅಂಶ ಬಿಡುಗಡೆಯಾಗುತ್ತೆ.
ನೀವು ಗರ್ಭಿಣಿಯಾಗಿದ್ದರೆ ಸೊಳ್ಳೆಗಳಿಗೆ ಅತೀವ ಪ್ರೀತಿ. ಗರ್ಭಿಣಿಯರ ದೇಹದಲ್ಲಿ ಕಾರ್ಬನ್ ಡೈಆಕ್ಸೈಡ್ ಇರುತ್ತೆ.
ನಿಮ್ಮ ಜೀನ್ಸ್ ಅಥವಾ ವಂಶವಾಹಿನಿಯಿಂದ ಕೆಲವೊಮ್ಮೆ ಸೊಳ್ಳೆಗಳು ಆಕರ್ಷಿತವಾಗುತ್ತವೆ.
ನೀವು ಬೀರ್ ಕುಡಿದಿದ್ದರೆ ಪೊಲೀಸರಿಂದಲೂ ಕೆಲವೊಮ್ಮೆ ಪಾರಾಗಬಹುದು. ಆದರೆ ಸೊಳ್ಳೆಗಳಿಂದ ಪಾರಾಗೋಕೆ ಸಾಧ್ಯವೇ ಇಲ್ಲ.