ಮನೆಯ ಸೌಂದರ್ಯ ಹೆಚ್ಚಿಸಲು ಹಾಗೂ ಪೂಜೆಗಾಗಿ ಮನೆಯಲ್ಲಿ ಬೇರೆ ಬೇರೆ ಚಿತ್ರಗಳನ್ನು, ಫೋಟೋಗಳನ್ನು ಇಡಲಾಗುತ್ತದೆ. ಸಣ್ಣದಿರಲಿ, ದೊಡ್ಡ ಫೋಟೋ ಇರಲಿ ಅದು ನಮ್ಮ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಅದೃಷ್ಟ, ದೌರ್ಭಾಗ್ಯಕ್ಕೂ ಫೋಟೋ ಕಾರಣವಾಗುತ್ತದೆ. ಮನೆಯಲ್ಲಿ ಫೋಟೋ ಇಡುವ ಮುನ್ನ ಅನೇಕ ಸಂಗತಿಗಳನ್ನು ತಿಳಿದಿರಬೇಕಾಗುತ್ತದೆ.
ಪೂಜೆ ಮನೆಯಲ್ಲಿ ಗುರುವಿನ ಫೋಟೋ ಸ್ಪಷ್ಟ ಹಾಗೂ ಸ್ವಚ್ಛವಾಗಿರಲಿ. ನಮ್ಮ ಕಣ್ಣಿನ ನೇರಕ್ಕೆ ಬರುವಂತೆ ಫೋಟೋವನ್ನು ಇಡಬೇಕು. ಒಂದೇ ಬಾರಿ ಅನೇಕ ಫೋಟೋಗಳನ್ನು ಪೂಜೆಗೆ ಇಡಬೇಡಿ. ಚಿತ್ರದ ಆಕೃತಿ ಹಾಗೂ ಬಣ್ಣ ಹಾಳಾಗಿದ್ದರೆ ತಕ್ಷಣ ಅದನ್ನು ಬದಲಿಸಬೇಕು.
ಮಲಗುವ ಕೋಣೆಯಲ್ಲಿ ಮದುವೆ ಸಂದರ್ಭದ ಫೋಟೋವನ್ನು ಹಾಕಿ. ಪತಿ-ಪತ್ನಿ ಒಟ್ಟಿಗಿರುವ ಫೋಟೋವನ್ನೂ ಹಾಕಬಹುದು. ತಂದೆ-ತಾಯಿ ಅಥವಾ ಸಹೋದರರ ಫೋಟೋವನ್ನು ಉತ್ತರ ದಿಕ್ಕಿಗೆ ಇಡಿ. ಮೃತ ವ್ಯಕ್ತಿಯ ಫೋಟೋವನ್ನು ದಕ್ಷಿಣ ದಿಕ್ಕಿಗೆ ಇಡಬೇಕು. ಮನೆಯ ಮುಖ್ಯ ಪ್ರದೇಶದಲ್ಲಿ ಕುಟುಂಬಸ್ಥರೆಲ್ಲ ಒಟ್ಟಿಗಿರುವ ಫೋಟೋವನ್ನು ಹಾಕಬೇಕು.
ಸಾಧ್ಯವಾದಷ್ಟು ಮನೆಯಲ್ಲಿ ಸುಂದರ ಚಿತ್ರಗಳನ್ನು ಇಡಿ. ಕಾಡು ಪ್ರಾಣಿ, ಬೆಂಕಿ, ಮುಳ್ಳಿನ ಚಿತ್ರ ಬೇಡ. ಚಿತ್ರಗಳು ಸ್ವಚ್ಛವಾಗಿರಲಿ. ಧೂಳು ಹಿಡಿಯದಂತೆ ನೋಡಿಕೊಳ್ಳಿ. ಮಲಗುವ ಕೋಣೆಯಲ್ಲಿ ದೇವರ ಹಾಗೂ ದೇವರ ಕೋಣೆಯಲ್ಲಿ ಕುಟುಂಬಸ್ಥರ ಫೋಟೋಗಳು ಬೇಡ. ಮನೆ ತುಂಬಾ ಚಿತ್ರ ತುಂಬಿರುವುದು ಬೇಡ.