ಹಿಮಾಚಲ ಪ್ರದೇಶದ ಲಡಬಡೋಲ್ ಜಿಲ್ಲೆಯ ಸಿಮಸ್ ಗಳ್ಳಿಯಲ್ಲಿ ದೇವಿಯ ಒಂದು ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಮಲಗಿದರೆ ಮಕ್ಕಳಿಲ್ಲದ ಮಹಿಳೆಯರಿಗೆ ಸಂತಾನ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ.
ಈ ದೇವಿ ‘ಸಿಮ್ಸಾ ಸಂತಾನಧಾತ್ರಿ’ ಎಂದೇ ಖ್ಯಾತಳಾಗಿದ್ದಾಳೆ. ಹಲವು ಕಡೆಗಳಿಂದ ಮಕ್ಕಳಾಗದ ಮಹಿಳೆಯರು ಇಲ್ಲಿ ಬಂದು ತಾಯಿಯ ನೆಲದಲ್ಲಿ ಮಲಗುತ್ತಾರೆ. ಹೀಗೆ ಮಲಗಿದಾಗ ಕನಸಿನಲ್ಲಿ ದೇವಿ ಯಾವುದಾದರೂ ರೂಪದಲ್ಲಿ ಬಂದು ಮಕ್ಕಳಾಗಲಿ ಎಂದು ಆಶೀರ್ವದಿಸಿ, ಹಣ್ಣು ಅಥವಾ ಕಾಯಿಯನ್ನು ಕೊಡುತ್ತಾಳಂತೆ. ಇದರಿಂದ ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂಬುದು ಕೂಡ ತಿಳಿಯುತ್ತದೆ ಎನ್ನಲಾಗುತ್ತದೆ.
ದೇವಿ ಪೇರಲೆ ಹಣ್ಣನ್ನು ಕೊಟ್ಟರೆ ಹುಟ್ಟುವ ಮಗು ಗಂಡು, ಬೆಂಡೇಕಾಯಿ ಕೊಟ್ಟರೆ ಹುಟ್ಟುವ ಮಗು ಹೆಣ್ಣಾಗುತ್ತದೆ ಎಂಬ ನಂಬಿಕೆ ಇದೆ. ಕೆಲವೊಬ್ಬರ ಕನಸಿನಲ್ಲಿ ದೇವಿ ಬರುವುದಿಲ್ಲ. ಹಾಗಾದರೆ ಅವರಿಗೆ ಸಂತಾನ ಭಾಗ್ಯವಿಲ್ಲ ಎಂದರ್ಥ. ಕನಸಿನಲ್ಲಿ ದೇವಿ ಬರಲಿಲ್ಲ ಎಂಬ ಕಾರಣಕ್ಕೆ ಅವರು ಮತ್ತೆ ಅಲ್ಲಿ ಮಲಗಿದರೆ ಮೈಮೇಲೆ ಕೆಂಪು ಗುಳ್ಳೆಗಳೆದ್ದು ತುರಿಕೆ ಆರಂಭವಾಗುತ್ತದೆಯಂತೆ.