ಸಾಮಾನ್ಯವಾಗಿ ಆಟ-ಪಾಠದ ವೇಳೆ ಮಕ್ಕಳು ಪೆಟ್ಟು ಮಾಡಿಕೊಳ್ತಾರೆ. ಕೆಲಸದ ಸಂದರ್ಭದಲ್ಲಿ ನಿಮಗೂ ಕೂಡ ಒಮ್ಮೊಮ್ಮೆ ಗಾಯವಾಗಬಹುದು. ಇದ್ದಕ್ಕಿದ್ದಂತೆ ಕಿವಿ ನೋವು ಕೂಡ ಶುರುವಾಗುತ್ತೆ. ಇಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನೆಲ್ಲ ನೀವು ಸುಲಭವಾಗಿ ನಿವಾರಿಸಿಕೊಳ್ಳಬಹುದು. ಇದಕ್ಕೆಲ್ಲ ಹಾಗಲಕಾಯಿಯೇ ಮದ್ದು.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಗಲಕಾಯಿ ನಿವಾರಿಸುತ್ತದೆ. ಹಾಗಲಕಾಯಿ, ಮತ್ತದರ ಜ್ಯೂಸ್ ಮಾತ್ರವಲ್ಲ ಅದರ ಎಲೆ ಕೂಡ ಬಹಳಷ್ಟು ಲಾಭದಾಯಕ.
ಗಾಯ, ಬಾವು, ಊತದಲ್ಲಿ ಕೀವು ತುಂಬಿದ್ದಲ್ಲಿ ಹಾಗಲಕಾಯಿಯ ಬೇರನ್ನು ಅರೆದು ಹಚ್ಚಿ. ಆಗ ಕೀವು ಹೊರಹೋಗಿ ಗಾಯ ಕೂಡ ಬೇಗನೆ ವಾಸಿಯಾಗುತ್ತದೆ.
ಹಾಗಲಕಾಯಿಯ ಬೇರು ದೊರೆಯದೇ ಇದ್ದಲ್ಲಿ ಎಲೆಗಳನ್ನು ರುಬ್ಬಿ ಅಥವಾ ಜಜ್ಜಿಕೊಂಡು ಸ್ವಲ್ಪ ಬಿಸಿ ಮಾಡಿ ಅದನ್ನು ಗಾಯದ ಮೇಲೆ ಹಾಕಿ ಪಟ್ಟಿ ಕಟ್ಟಿ. ಇದರಿಂದ ಕೀವು ಹೊರಹೋಗುತ್ತದೆ. ಗಾಯದಿಂದ ಉಂಟಾಗುವ ನೋವು ಕೂಡ ಹಾಗಲಕಾಯಿಯಿಂದ ಕಡಿಮೆಯಾಗುತ್ತದೆ.
ಮೂತ್ರಕೋಶದಲ್ಲಿ ಕಲ್ಲು ಬೆಳೆದಿದ್ದರೆ ಹಾಗಲಕಾಯಿ ಜ್ಯೂಸ್ ಸೇವನೆಯಿಂದ ಪರಿಹಾರ ಸಿಗುತ್ತದೆ. ಕಲ್ಲನ್ನು ಹೊರಹಾಕುವಲ್ಲಿ ಹಾಗಲಕಾಯಿ ಜ್ಯೂಸ್ ನೆರವಾಗುತ್ತದೆ. ಆದ್ರೆ ತಾಜಾ ಹಾಗಲಕಾಯಿಯ ಜ್ಯೂಸನ್ನೇ ಸೇವಿಸಿ.
ಕಿವಿಗಳಲ್ಲಿ ನೋವು ಶುರುವಾಗಿದ್ದರೆ ಮೂರ್ನಾಲ್ಕು ಹನಿ ಹಾಗಲಕಾಯಿಯ ರಸವನ್ನು ಹಾಕಿ. ಕಿವಿ ನೋವು ಮಾಯವಾಗುತ್ತದೆ.