![](https://kannadadunia.com/wp-content/uploads/2022/05/1152795-ginger-news.jpg)
ಶುಂಠಿ ಪ್ರತಿ ಅಡುಗೆ ಮನೆಯಲ್ಲೂ ಇದ್ದೇ ಇರುತ್ತದೆ. ಒಂದಿಲ್ಲೊಂದು ಮೇಲೋಗರಕ್ಕೆ ಪ್ರತಿನಿತ್ಯ ನಾವು ಶುಂಠಿ ಬಳಸ್ತೇವೆ. ವಾಸ್ತವವಾಗಿ ಶುಂಠಿ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಶುಂಠಿಯಿಂದ ಸಾಕಷ್ಟು ಪ್ರಯೋಜನಗಳಿವೆ. ಕೆಲವೊಂದು ರೋಗಗಳನ್ನು ಕೂಡ ಗುಣಪಡಿಸುವ ಔಷಧೀಯ ಅಂಶಗಳು ಶುಂಠಿಯಲ್ಲಿವೆ.
ಸಕ್ಕರೆ ಕಾಯಿಲೆ ಇರುವವರಿಗೆ ಶುಂಠಿ ವರದಾನವಾಗಿದೆ. ಶುಂಠಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಬಹುದು. ಆದ್ರೆ ಶುಂಠಿಯನ್ನು ಅತಿಯಾಗಿ ಸೇವನೆ ಮಾಡಬಾರದು. ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಉತ್ತಮ ಲಾಭ ದೊರೆಯುತ್ತದೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಮಧುಮೇಹ ರೋಗಿಗಳು ಸೀಮಿತ ಪ್ರಮಾಣದಲ್ಲಿ ಶುಂಠಿಯನ್ನು ಸೇವಿಸಬೇಕು. ನೀವು ದಿನಕ್ಕೆ 4 ಗ್ರಾಂ ಶುಂಠಿಯನ್ನು ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಇನ್ಸುಲಿನ್ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅತಿಯಾಗಿ ಸೇವಿಸಿದರೆ ಎದೆಯುರಿ, ಅತಿಸಾರ ಅಥವಾ ಹೊಟ್ಟೆಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ.
ಕೆಲವರಿಗೆ ಮೈಗ್ರೇನ್ ಸಮಸ್ಯೆ ಜಾಸ್ತಿ ಇರುತ್ತದೆ. ಅಂಥವರು ಹಸಿ ಶುಂಠಿ ತಿನ್ನುವುದರಿಂದ ಮೈಗ್ರೇನ್ ನೋವು ಕಡಿಮೆಯಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಶುಂಠಿಯು ತುಂಬಾ ಪ್ರಯೋಜನಕಾರಿಯಾಗಿದೆ. ಅಂದರೆ ಹೃದಯಾಘಾತದ ಅಪಾಯವೂ ಇದರಿಂದ ಕಡಿಮೆಯಾಗುತ್ತದೆ. ಶುಂಠಿಯನ್ನು ಚಹಾಕ್ಕೆ ಕೂಡ ಬಳಸಬಹುದು. ಅಥವಾ ದಾಲ್, ಪಲ್ಯ, ಗ್ರೇವಿಗಳಿಗೂ ಹಾಕಬಹುದು.