ಮಧುಮೇಹ ವಾಸಿಯಾಗದಂತ ಖಾಯಿಲೆ ಅಂತಾನೇ ಭಾವಿಸಲಾಗಿದೆ. ಆದ್ರೆ ಬ್ರಿಟನ್ ವಿಜ್ಞಾನಿಗಳು ಅದಕ್ಕೂ ಒಂದು ಪರಿಹಾರ ಕಂಡು ಹಿಡಿದಿದ್ದಾರೆ. ತೂಕವನ್ನು ಕಡಿಮೆ ಮಾಡಿಕೊಂಡ್ರೆ ಟೈಪ್ 2 ಡಯಾಬಿಟೀಸ್ ಅನ್ನು ರಿವರ್ಸ್ ಮಾಡಬಹುದು ಎನ್ನುತ್ತಾರೆ ವಿಜ್ಞಾನಿಗಳು.
ದೀರ್ಘಕಾಲದ ದೇಹಸ್ಥಿತಿಯನ್ನೇ ಬದಲಾಯಿಸಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸುಮಾರು 6 ವರ್ಷಗಳಿಂದ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರನ್ನು ಪ್ರಯೋಗಕ್ಕೆ ಒಳಪಡಿಸಿ. ಎಲ್ಲರಿಗೂ ತೂಕ ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿತ್ತು.
ಶೇ.86 ರಷ್ಟು ಮಂದಿ ಸುಮಾರು 15 ಕೆಜಿಯಷ್ಟು ತೂಕ ಕಳೆದುಕೊಂಡ್ರೆ, ಶೇ.73ರಷ್ಟು ಜನರು 10 ಕೆಜಿ ತೂಕ ಇಳಿಸಲು ಯಶಸ್ವಿಯಾಗಿದ್ದಾರೆ. ಬಹುತೇಕ ಎಲ್ಲರೂ ಡಯಾಬಿಟಿಸ್ ನಿಂದ ಮುಕ್ತಿ ಪಡೆದಿದ್ದಾರೆ. ಸುಮಾರು 3 ತಿಂಗಳುಗಳವರೆಗೆ ಎಲ್ಲರನ್ನೂ ಸ್ಟ್ರಿಕ್ಟ್ ಡಯಟ್ ನಲ್ಲಿಡಲಾಗಿತ್ತು.
ದಿನಕ್ಕೆ ಕೇವಲ 825-853 ಕ್ಯಾಲೋರಿ ಆಹಾರ ನೀಡಲಾಗುತ್ತಿತ್ತು. ತೂಕ ಇಳಿಸಿದ ನಂತರ ಅದನ್ನು ಕಾಪಾಡಿಕೊಳ್ಳಲು ಕೂಡ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಟೈಪ್ 2 ಡಯಾಬಿಟಿಸ್ ನಿಂದ ಬಳಲುತ್ತಿರುವವರು ಡಯಟ್, ನಿಯಮಿತವಾದ ವ್ಯಾಯಾಮ ಮಾಡುವ ಮೂಲಕ ತೂಕ ಇಳಿಸಿಕೊಂಡಲ್ಲಿ ಖಾಯಿಲೆಯಿಂದ ಪಾರಾಗಬಹುದು.