ಧೂಳು, ಕಲುಷಿತ ಗಾಳಿ, ವಾತಾವರಣದ ಹಾನಿಕಾರಕ ಅಂಶಗಳಿಂದ ನಮ್ಮ ಶ್ವಾಸಕೋಶವು ತೊಂದರೆಗೀಡಾಗುತ್ತದೆ. ಇದರಿಂದ ಸರಿಯಾಗಿ ಉಸಿರಾಟವಾಡುವುದಕ್ಕೆ ಆಗದೇ ತೊಂದರೆ ಅನುಭವಿಸಬೇಕಾಗುತ್ತದೆ.
ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳಿಂದ ನಮ್ಮ ಶ್ವಾಸಕೋಶವನ್ನು ಸ್ವಚ್ಛಗೊಳಿಸಬಹುದು. ಸರಾಗವಾಗಿ ಉಸಿರಾಡಬಹುದು.
BIG NEWS: ‘ಉದ್ಯೋಗ’ ಸೃಷ್ಟಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಈಗಲೂ ನಂಬರ್ 1
ಮೊದಲಿಗೆ ಒಂದು ಲೀಟರ್ ಶುದ್ಧವಾದ ನೀರು ತೆಗೆದುಕೊಳ್ಳಿ. ಅದಕ್ಕೆ ಕಾಲು ಕಪ್ ನಷ್ಟು ಕಲ್ಲು ಸಕ್ಕರೆಯನ್ನು ಸೇರಿಸಿ. ಹಾಗೇ ಕಾಲು ಕಪ್ ನಷ್ಟು ತುರಿದ ಈರುಳ್ಳಿ, ಹಾಗೂ ಶುಂಠಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ಕುದಿಸಿ. ಕುದಿಯಲು ಆರಂಭಿಸಿದಾಗ 1 ಚಮಚ ಅರಿಶಿನ ಪುಡಿಯನ್ನು ಸೇರಿಸಿ. ಒಂದು ಲೀಟರ್ ನೀರು ಅರ್ಧ ಲೀಟರ್ ವಾಗುವವರೆಗೆ ಚೆನ್ನಾಗಿ ಕುದಿಸಿ. ನಂತರ ಶೋಧಿಸಿ ಇಟ್ಟುಕೊಳ್ಳಿ.
ಉಗುರು ಬೆಚ್ಚಗಿನ ಈ ನೀರನ್ನು ಸ್ವಲ್ಪ ಸ್ವಲ್ಪವೇ ಕುಡಿಯಿರಿ. ಇದರಿಂದ ನಿಮ್ಮ ಶ್ವಾಸಕೋಶ ಕ್ಲೀನ್ ಆಗುವುದರ ಜತೆಗೆ ಗಂಟಲುರಿ, ಗಂಟಲಿನ ಕಿರಿಕಿರಿ ಸಮಸ್ಯೆಯಿಂದ ಕೂಡ ಪಾರಾಗಬಹುದು.