alex Certify ʼಶೃಂಗಾರʼ ಮತ್ತು ʼಅಶ್ಲೀಲತೆʼ ನಡುವೆ ಇರುವ ವ್ಯತ್ಯಾಸವೇನು….? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಶೃಂಗಾರʼ ಮತ್ತು ʼಅಶ್ಲೀಲತೆʼ ನಡುವೆ ಇರುವ ವ್ಯತ್ಯಾಸವೇನು….? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಬಗ್ಗೆ ದಿನಕ್ಕೊಂದು ವಿಷ್ಯ ಬಹಿರಂಗವಾಗ್ತಿದೆ. ರಾಜ್ ಕುಂದ್ರಾ, ಅಶ್ಲೀಲ ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕ್ತಿದ್ದಾರೆ.

ಹಾಟ್‌ಶಾಟ್ಸ್ ಅಭಿವೃದ್ಧಿಪಡಿಸಲು, ಕಂಪನಿ ತೆರೆಯಲು ರಾಜ್ ಕುಂದ್ರಾ ಮುಂದಾಗಿದ್ದರು ಎಂಬ ಆರೋಪವಿದೆ. ವಯಸ್ಕರ ಚಲನಚಿತ್ರ ವಿಷ್ಯಗಳನ್ನು ಪ್ರಸಾರ ಮಾಡಲು ಮೊಬೈಲ್ ಅಪ್ಲಿಕೇಷನ್ ಬಳಸುತ್ತಿದ್ದರು ಎಂಬ ಆರೋಪವೂ ಇದೆ.

ಈ ಎಲ್ಲ ಆರೋಪದ ಮಧ್ಯೆ ಕುಂದ್ರಾ ಪರ ವಕೀಲ ಸುಭಾಷ್ ಜಾಧವ್, ನಿಜವಾದ ಸಂಭೋಗದ ಚಿತ್ರಣಗಳನ್ನು ಮಾತ್ರ ಪೋರ್ನ್ ಎಂದು ಪರಿಗಣಿಸಲಾಗುತ್ತದೆ. ಉಳಿದಂತೆ ಎಲ್ಲವೂ ಅಶ್ಲೀಲ ವಸ್ತುಗಳು ಎಂದು ವಾದಿಸಿದ್ದಾರೆ. ಈಗ ಇದ್ರ ಬಗ್ಗೆ ಚರ್ಚೆಯಾಗ್ತಿದೆ.

ಅಶ್ಲೀಲತೆ (ಫೋನೋಗ್ರಾಫಿ) ಎಂದರೇನು ? ಲೈಂಗಿಕ ಕ್ರಿಯೆಯನ್ನು ಉತ್ತೇಜಿಸುವುದು ಫೋನೋಗ್ರಾಫಿಯ ಏಕೈಕ ಉದ್ದೇಶವಾಗಿರುತ್ತದೆ. ಆಕ್ಸ್ ಫರ್ಡ್ ನಿಘಂಟಿನ ಪ್ರಕಾರ, ಫೋನೋಗ್ರಾಫಿ, ಬೆತ್ತಲೆ ಜನರನ್ನು ಮತ್ತು ಲೈಂಗಿಕ ಕ್ರಿಯೆಗಳನ್ನು ವಿವರಿಸುತ್ತದೆ ಅಥವಾ ತೋರಿಸುತ್ತದೆ. ಜನರು ಲೈಂಗಿಕವಾಗಿ ಪ್ರಚೋದಿತರಾಗುವಂತೆ ಮಾಡುವುದು ಇದರ ಉದ್ದೇಶ. ಇತರರು ಇದನ್ನು ಆಕ್ಷೇಪಾರ್ಹವೆಂದು ಭಾವಿಸುತ್ತಾರೆ.

ಶೃಂಗಾರ (erotica) ಎಂದರೇನು ? ಶೃಂಗಾರವು,ಕಾಮಪ್ರಚೋದನಕಾರಿ ಅಥವಾ ಲೈಂಗಿಕವಾಗಿ ಪ್ರಚೋದಿಸುವ ವಿಷಯದೊಂದಿಗೆ ವ್ಯವಹರಿಸುವ ಯಾವುದೇ ಕಲಾಕೃತಿಯಾಗಿದೆ. ಇದು ಚಿತ್ರಕಲೆ, ಶಿಲ್ಪಕಲೆ, ಛಾಯಾಚಿತ್ರ, ನಾಟಕ, ಚಲನಚಿತ್ರ, ಸಂಗೀತ ಅಥವಾ ಸಾಹಿತ್ಯವನ್ನು ಒಳಗೊಂಡಿದೆ. ಇರೋಟಿಕಾವನ್ನು ವ್ಯಕ್ತಿಯ ಕಲಾತ್ಮಕ ದೃಷ್ಟಿಕೋನವೆಂದು ಪರಿಗಣಿಸಲಾಗುತ್ತದೆ.ಇದರ ಏಕೈಕ ಉದ್ದೇಶವೆಂದರೆ ಕಲೆಯನ್ನು ಪ್ರಶಂಸಿಸುವುದು.

ಭಾರತದಲ್ಲಿ ಅಶ್ಲೀಲತೆಗೆ ಸಂಬಂಧಿಸಿದ ಯಾವ ಕಾನೂನಿದೆ ? ಮಾಹಿತಿ ತಂತ್ರಜ್ಞಾನ  ಕಾಯ್ದೆ 2000, ಪೊಕ್ಸೊ ಕಾಯ್ದೆ 2012 ಅಶ್ಲೀಲ ವಿಷ್ಯಗಳಿಗೆ ಸಂಬಂಧಿಸಿದ ಕಾನೂನಾಗಿದೆ.

ಐಟಿ ಕಾಯ್ದೆ 2000 ರ ಸೆಕ್ಷನ್ 67 ವಿಭಾಗವು ಅಶ್ಲೀಲ ವಸ್ತುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಕಟಿಸುವುದನ್ನು ಅಥವಾ ರವಾನಿಸುವುದನ್ನು ನಿಷೇಧಿಸುತ್ತದೆ. ಯಾರು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಕಟಿಸುತ್ತಾರೆ ಅಥವಾ ಪ್ರಸಾರ ಮಾಡುತ್ತಾರೆ ಅಥವಾ ಪ್ರಚಾರಕ್ಕೆ ಕಾರಣವಾಗುತ್ತಾರೋ, ಯಾರು ಅದನ್ನು ಓದಲು ಅಥವಾ ಕೇಳಲು ಕಾರಣವಾಗುತ್ತಾರೋ ಅವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಐದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...