ಸೆಕ್ಸ್ ಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ಆಗಾಗ ನಡೆಯುತ್ತಿರುತ್ತವೆ. ಸಂಶೋಧನೆ, ಸಮೀಕ್ಷೆ ವೇಳೆ ಕುತೂಹಲಕಾರಿ ವಿಷ್ಯಗಳು ಹೊರ ಬೀಳುತ್ತವೆ. ಇದೆಲ್ಲ ನಿಜ ಎನ್ನಲು ಸಾಧ್ಯವಿಲ್ಲ. ಆದ್ರೆ ಆಸಕ್ತಿದಾಯಕ ವಿಷ್ಯವಂತೂ ಹೌದು.
ಸಮೀಕ್ಷೆ ಪ್ರಕಾರ ಅನೇಕ ಸ್ತ್ರೀ ಜೊತೆ ಸಂಬಂಧ ಬೆಳೆಸುವ ಪುರುಷ ಸಂಭೋಗಕ್ಕೆ ಬಹಳ ಮಹತ್ವದ ಸ್ಥಾನ ನೀಡ್ತಾನೆ. ಆದ್ರೆ ಸಂಪೂರ್ಣ ತೃಪ್ತನಾಗಿರುವುದಿಲ್ಲವಂತೆ.
ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಆದ್ರೆ ಇದು ಸುಳ್ಳು. ಗರ್ಭಿಣಿಯರಲ್ಲಿ ಲೈಂಗಿಕ ಆಸಕ್ತಿ ಹಿಂದಿನಂತೆ ಇರುತ್ತದೆ ಇಲ್ಲವೆ ಹೆಚ್ಚಾಗುತ್ತದೆ.
ಮನೋವೈಜ್ಞಾನಿಗಳ ಸಂಶೋಧನೆ ಪ್ರಕಾರ, ಬೇರೆ ಬಣ್ಣಕ್ಕಿಂತ ಕೆಂಪು ಬಣ್ಣದಲ್ಲಿ ಮಹಿಳೆಯರು ಹೆಚ್ಚು ಪುರುಷರನ್ನು ಆಕರ್ಷಿಸುತ್ತಾರಂತೆ.
ಒಂದು ಅಧ್ಯಯನದ ಪ್ರಕಾರ ಯಾವ ಮಹಿಳೆ ತನ್ನ ಅವಶ್ಯಕತೆ ಜೊತೆಗೆ ನೆರೆ ಹೊರೆಯವರ ಅವಶ್ಯಕತೆ, ಅಗತ್ಯತೆ, ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾಳೋ ಆಕೆ ಲೈಂಗಿಕ ಜೀವನದಲ್ಲಿ ಕೂಡ ಉತ್ತಮ ಪಾಲುದಾರಳಾಗಿರುತ್ತಾಳಂತೆ.
ವಾರದಲ್ಲಿ ಎರಡರಿಂದ ಮೂರು ಬಾರಿ ಶಾರೀರಿಕ ಸಂಬಂಧ ಬೆಳೆಸುವುದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ರೋಮ್ಯಾಂಟಿಕ್ ವಿಷ್ಯಗಳನ್ನು ಓದುವ ಮಹಿಳೆಯರು ಅದನ್ನು ಓದದ ಮಹಿಳೆಯರಿಗಿಂತ ಹೆಚ್ಚು ಸೆಕ್ಸ್ ನಲ್ಲಿ ಆನಂದ ಪಡೆಯುತ್ತಾರೆ.
ಲೈಂಗಿಕ ಆಸಕ್ತಿ ಹೆಚ್ಚಿಸಲು ವ್ಯಾಯಾಮ ಉತ್ತಮ. ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಂಡವರು ವ್ಯಾಯಾಮ ಮಾಡಿ ಮತ್ತೆ ಆಸಕ್ತಿ ಬೆಳೆಸಿಕೊಳ್ಳಬಹುದು.