ದಿನವಿಡಿ ಕೆಲಸ ಮಾಡಿ ಮನೆಗೆ ವಾಪಸ್ ಬರುವ ಮಂದಿ, ಮುಖ್ಯವಾಗಿ ಎರಡನ್ನು ಬಯಸ್ತಾರೆ. ಒಂದು ಸುಖ ನಿದ್ರೆ. ಇನ್ನೊಂದು ಮರುದಿನ ಮನಸ್ಸಿಗೆ ಉತ್ಸಾಹ ನೀಡುವಂತಹ ಕನಸು. ಸಾಮಾನ್ಯವಾಗಿ ಅನೇಕರಿಗೆ ಸಂಭೋಗ ಬೆಳೆಸಿದಂತ ಸ್ವಪ್ನ ಬೀಳುತ್ತದೆ. ಇದು ಎಷ್ಟು ಸರಿ ಎಂಬ ಪ್ರಶ್ನೆ ಅನೇಕರಲ್ಲಿ ಮನೆ ಮಾಡುತ್ತದೆ.
ಈ ಬಗ್ಗೆ ಮಾಂಟ್ರಿಯಲ್ ವಿಶ್ವವಿದ್ಯಾನಿಲಯ ಸಮೀಕ್ಷೆಯೊಂದನ್ನು ನಡೆಸಿತ್ತು. ಅದ್ರಲ್ಲಿ ಪಾಲ್ಗೊಂಡಿದ್ದವರಲ್ಲಿ ಶೇಕಡಾ 8 ರಷ್ಟು ಮಂದಿ ಸಂಭೋಗದ ಕನಸು ಬೀಳುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದರು. ಇದೊಂದು ಅನೈಚ್ಛಿಕ ಚಟುವಟಿಕೆ. ಸಾಮಾನ್ಯವಾಗಿ ಸೆಕ್ಸಿನಿಂದ ವಂಚಿತ ಅಥವಾ ಸಂಭೋಗ ಸುಖವನ್ನು ಅದುಮಿಟ್ಟುಕೊಂಡವರಿಗೆ ಇಂಥ ಸ್ವಪ್ನಗಳು ಬೀಳುವುದು ಹೆಚ್ಚು. ಸ್ವಪ್ನದಲ್ಲಿ ಕಂಡ ಸಂಭೋಗದಿಂದ ಸುಖ ಹಾಗೂ ಆನಂದ ಸಿಗುತ್ತದೆ ಎನ್ನುತ್ತಾರೆ ತಜ್ಞರು.
ಕನಸಿನ ಬಗ್ಗೆ ಇನ್ನೂ ಸಮೀಕ್ಷೆಗಳು ನಡೆಯುತ್ತಿವೆ. ಕನಸಿನಲ್ಲಿ ಶಾರೀರಿಕ ಸಂಬಂಧ ಬೆಳೆಸಿದಂತೆ ಕಂಡು, ಅದ್ರಿಂದ ನೆಮ್ಮದಿ, ಸುಖ ಸಿಕ್ಕು, ಒತ್ತಡ ಕಡಿಮೆಯಾದ್ರೆ ಇಂಥ ಕನಸು ಕಾಣುವುದ್ರಲ್ಲಿ ತಪ್ಪಿಲ್ಲವೆನ್ನುತ್ತಾರೆ ತಜ್ಞರು. ಸೆಕ್ಸ್ ಕನಸಿನ ಬಗ್ಗೆ ತಜ್ಞರು ಸಾಕಷ್ಟು ಸಂಶೋಧನೆಗಳನ್ನು ಮಾಡ್ತಿದ್ದಾರೆ. ಹೊಟ್ಟೆ ಕೆಳಗೆ ಹಾಕಿ ಮಲಗಿದಾಗ ಈ ಕನಸು ಹೆಚ್ಚು ಬೀಳುತ್ತದೆಯಂತೆ.
ಸಂಭೋಗದ ಬಗ್ಗೆ ಕನಸು ಕಂಡ್ರೆ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಸಂಭೋಗದ ಕನಸು ಕಾಣಬೇಕು ಎನ್ನುತ್ತಾರೆ ತಜ್ಞರು. ಸಿಟ್ಟು ಬಂದಾಗ, ಮಂದ ಬೆಳಕಿನಲ್ಲಿ ಶಾಂತವಾಗಿ ಮಲಗಬೇಕು. ಸಂಗಾತಿಯನ್ನು ನೆನಪು ಮಾಡಿಕೊಳ್ಳಬೇಕು. ಹಸ್ತಮೈಥುನ ಮಾಡಬಾರದು. ಆಗ ಸೆಕ್ಸ್ ಸಂಬಂಧಿ ಕನಸು ಬೀಳುತ್ತದೆ ಎನ್ನುತ್ತಾರೆ.