ಬೆಂಗಳೂರು: ಕೋವಿಡ್ ಮೂರನೇ ಅಲೆಯಂತಹ ಆತಂಕದ ಸಂದರ್ಭದಲ್ಲಿ ವೈರಸ್ ನಿಂದ ರಕ್ಷಿಸಿಕೊಳ್ಳಲು ನಮ್ಮ ಇಮ್ಯೂನಿಟಿ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಆರೋಗ್ಯ ಸಲಹೆಯನ್ನು ನೀಡಿದ್ದಾರೆ.
ಕೋವಿಡ್ ಪ್ರಯಾಣ ನಿರ್ಬಂಧ; ಬ್ರಿಟನ್‌ಗೆ ಭಾರತದ ತಿರುಗೇಟು
ಸಾಮಾನ್ಯವಾಗಿ ವರ್ಷಕ್ಕೆ ಒಮ್ಮೆಯಾದರೂ ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂತ ಸಂದರ್ಭದಲ್ಲಿ ನಮ್ಮ ದೇಹದಲ್ಲಿನ ಸೆಲ್ಸ್ ವೈರಸ್ ವಿರುದ್ಧ ಹೋರಾಡಲು ಆರಂಭವಾಗುತ್ತದೆ. ಹೀಗೆ ನಮ್ಮಲ್ಲಿ ಆಂಟಿಬಾಡಿ ನಿರ್ಮಾಣವಾಗುತ್ತದೆ. ಅಂತೆಯೇ ಪ್ರತಿಯೊಬ್ಬರಲ್ಲಿಯೂ ಇಮ್ಯೂನಿಟಿ ಸಿಸ್ಟಮ್ ಇರುತ್ತದೆ. ಆದರೆ ಹೆಚ್ಚು ಕ್ರಿಯಾಶೀಲರಾಗಿ, ಚಟುವಟಿಕೆಯಿಂದ ಕೂಡಿರದೇ ಕುಳಿತಲ್ಲೇ ಕುಳಿತುಕೊಳ್ಳುವರಲ್ಲಿ ಇಮ್ಯೂನಿಟಿ ಸಿಸ್ಟಮ್ ಆಕ್ಟಿವ್ ಆಗದೇ ಸಾಮಾನ್ಯ ನೆಗಡಿ, ಕೆಮ್ಮು ಬಂದರೂ ಆಸ್ಪತ್ರೆಗೆ ದಾಖಲಾಗುವಂತಹ ಸಂದರ್ಭ ಬರುತ್ತದೆ ಎಂದು ಡಾ. ರಾಜು ತಿಳಿಸಿದ್ದಾರೆ.
ಕೊರೋನಾ ಏಟಿಗೆ ಉಸಿರು ಚೆಲ್ಲಿದ ಕುಟುಂಬ, ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ವ್ಯಕ್ತಿಯ ದೇಹದಲ್ಲಿ ಯಾವುದೇ ವೈರಸ್ ಅಥವಾ ಇನ್ ಫೆಕ್ಷನ್ ವಿರುದ್ಧ ಹೋರಾಡಲು ಪ್ರತಿರೋಧಕ ಶಕ್ತಿ ನಮ್ಮಲ್ಲೇ ನಿರ್ಮಾಣವಾಗಲು ಸಾಮಾನ್ಯ ನೆಗಡಿ, ಕೆಮ್ಮಿನಂತಹ ಇನ್ ಫೆಕ್ಷನ್ ಆಗಾಗ ಬಂದು ಹೋಗುವ ಪ್ರಾಕ್ಟೀಸ್ ಮುಖ್ಯ ಎಂದು ಹೇಳಿದ್ದಾರೆ. ಅಂದರೆ ವೈರಸ್ ನಿಂದ ನಮ್ಮ ಇಮ್ಯೂನಿಟಿ ಹೆಚ್ಚಾಗಲು ಒಲಂಪಿಕ್ಸ್ ನಲ್ಲಿ ಗೆಲ್ಲಲು ಹೇಗೆ ರಿಹರ್ಸಲ್, ಪ್ರಾಕ್ಟೀಸ್ ಮುಖ್ಯವೋ ಹಾಗೇ ನಮ್ಮ ದೇಹಕ್ಕೂ ರಿಹರ್ಸಲ್ ಮುಖ್ಯ ಎಂದು ಡಾ.ರಾಜು ಅಭಿಪ್ರಾಯಪಟ್ಟಿದ್ದಾರೆ. ಡಾ.ರಾಜು ಅವರ ಹೊಸ ವಿಡಿಯೋ ನೀವು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.