ಎಣ್ಣೆ ಪದಾರ್ಥಗಳಿಂದ ವೈಟ್ ಹೆಡ್ಸ್ ಸಮಸ್ಯೆ ಹೆಚ್ಚುತ್ತದೆ. ಕೂದಲು ಮತ್ತು ಸತ್ತ ಚರ್ಮದ ಕೋಶದೊಳಗೆ ಕುಳಿತ ಬ್ಯಾಕ್ಟೀರಿಯಾಗಳು ಬೆಳೆಯುತ್ತಲೇ ಈ ಸಮಸ್ಯೆ ವಿಪರೀತವಾಗುತ್ತದೆ. ಇವೇ ಕ್ರಮೇಣ ವೈಟ್ ಹೆಡ್ಸ್ ಗಳಾಗಿ ಕಾಡುತ್ತವೆ.
ಇದರಿಂದ ದೂರವಿರಲು ನಿಮ್ಮ ಚರ್ಮವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಮುಖದ ಮೇಲೆ ಅನಗತ್ಯ ಸೌಂದರ್ಯ ಉತ್ಪನ್ನ ಹಚ್ಚದಿರಿ. ಕೂದಲನ್ನು ಮುಖದಿಂದ ದೂರವಿಡಿ. ಚರ್ಮವನ್ನು ಹಬೆಗೆ ಒಡ್ಡಿದಾಗ ರಂಧ್ರಗಳು ತೆರೆದುಕೊಳ್ಳುತ್ತವೆ. ಆಗಾಗ್ಗೆ ಹಬೆ ತೆಗೆದುಕೊಳ್ಳಿ. ನಿತ್ಯ ಮಲಗುವ ಮುನ್ನ ಇದನ್ನು ಮಾಡುವುದು ಬಹಳ ಒಳ್ಳೆಯದು.
ಬೆಚ್ಚಗಿನ ನೀರಿನಲ್ಲಿ ಅಪಲ್ ಸೈಡ್ ವಿನೆಗರ್ ಬೆರೆಸಿ, ನಿಮ್ಮ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಳಿಕ ಸ್ವಚ್ಛವಾದ ಮೃದುವಾದ ಟವೆಲ್ ನಿಂದ ಒರೆಸಿ. ಮುಖಕ್ಕೆ ಟೀ ಟ್ರೀ ಎಣ್ಣೆ ಹಚ್ಚುವುದರಿಂದಲೂ ಇದು ನಿವಾರಣೆಯಾಗುತ್ತದೆ.
ನಿಂಬೆರಸವನ್ನು ಹತ್ತಿಯಲ್ಲಿ ಅದ್ದಿ ವೈಟ್ ಹೆಡ್ಸ್ ಇರುವ ಜಾಗಕ್ಕೆ ಒತ್ತಿ, ಅರ್ಧ ಗಂಟೆ ಬಳಿಕ ತೊಳೆಯಿರಿ. ಮುಖದ ಮೇಲಾಗುವ ಬದಲಾವಣೆ ಗುರುತಿಸಿ.