alex Certify ʼವಿಶ್ವಕಪ್‌ʼ ನಲ್ಲಿ ಆಡ್ತಿದ್ದಾರೆ ಐವರು ಶ್ರೀಮಂತ ಕ್ರಿಕೆಟರ್ಸ್‌; ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ʼಟೀಂ ಇಂಡಿಯಾʼ ಆಟಗಾರ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಶ್ವಕಪ್‌ʼ ನಲ್ಲಿ ಆಡ್ತಿದ್ದಾರೆ ಐವರು ಶ್ರೀಮಂತ ಕ್ರಿಕೆಟರ್ಸ್‌; ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ʼಟೀಂ ಇಂಡಿಯಾʼ ಆಟಗಾರ !

ವಿಶ್ವಕಪ್ ಕ್ರಿಕೆಟ್‌ ಪಂದ್ಯಾವಳಿಗಾಗಿ ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ವಿಶ್ವಕಪ್‌ ಆಯೋಜಿಸಲಾಗಿದೆ. 45 ದಿನಗಳ ಕಾಲ ಈ ಮೆಗಾ ಕ್ರೀಡಾಕೂಟ ಭಾರತದಲ್ಲೇ ತಡೆಯುತ್ತಿರುವುದು ವಿಶೇಷ. 10 ತಂಡಗಳ ನಡುವೆ ಒಟ್ಟು 48 ಪಂದ್ಯಗಳು ನಡೆಯಲಿವೆ.

ಭಾರತದ 10 ವಿವಿಧ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ವಿಶೇಷ ಅಂದ್ರೆ ವಿಶ್ವಕಪ್‌ನಲ್ಲಿ ಆಡ್ತಿರೋ ಘಟಾನುಘಟಿ ಕ್ರಿಕೆಟಿಗರಲ್ಲಿ ಐವರು ಅತಿ ಶ್ರೀಮಂತರಿದ್ದಾರೆ. ಈ ಪೈಕಿ ಇಬ್ಬರು ಭಾರತೀಯರು ಅನ್ನೋದು ವಿಶೇಷ.

ವಿರಾಟ್‌ ಕೊಹ್ಲಿ – 2023ರ ವಿಶ್ವಕಪ್‌ನಲ್ಲಿ ಆಡುತ್ತಿರುವ ಅತ್ಯಂತ ಶ್ರೀಮಂತ ಆಟಗಾರ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಅವರ ಒಟ್ಟಾರೆ ಆಸ್ತಿ ಸುಮಾರು 950 ಕೋಟಿ ರೂಪಾಯಿ.

ಪ್ಯಾಟ್‌ ಕಮಿನ್ಸ್‌ – ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್‌ ಕೊಹ್ಲಿ ಅವರನ್ನು ಬಿಟ್ರೆ ವಿಶ್ವಕಪ್‌ ಆಡ್ತಿರೋ ಅತ್ಯಂತ ಸಿರಿವಂತ ಕ್ರಿಕೆಟರ್‌ ಇವರು. ಪ್ಯಾಟ್ ಕಮ್ಮಿನ್ಸ್ ಅವರ ಅಂದಾಜು ಸಂಪತ್ತು 350 ಕೋಟಿ ರೂಪಾಯಿ ಅಂತ ಹೇಳಲಾಗ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಅವರ ಸಂಪತ್ತು ಗಣನೀಯವಾಗಿ ಹೆಚ್ಚಿದೆ.

ರೋಹಿತ್‌ ಶರ್ಮಾ – ಈ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೆಸರು ಮೂರನೇ ಸ್ಥಾನದಲ್ಲಿದೆ. ವರದಿಗಳ ಪ್ರಕಾರ ರೋಹಿತ್ ಶರ್ಮಾ, 210 ಕೋಟಿ ರೂಪಾಯಿ ಆಸ್ತಿಗೆ ಒಡೆಯ.

ಸ್ಟೀವ್‌ ಸ್ಮಿತ್‌ – ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸ್ಟೀವ್ ಸ್ಮಿತ್ ಅವರ ಆಸ್ತಿ ಸುಮಾರು 200 ಕೋಟಿ ರೂಪಾಯಿ.

ಮಿಚೆಲ್‌ ಸ್ಟಾರ್ಕ್‌ – ಈ ಬಾರಿ ವಿಶ್ವಕಪ್‌ ಆಡ್ತಿರೋ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ 5ನೇ ಸ್ಥಾನದಲ್ಲಿದ್ದಾರೆ. ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಒಟ್ಟಾರೆ ಆಸ್ತಿ 150 ಕೋಟಿ ರೂಪಾಯಿಗೂ ಅಧಿಕ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...