ದೇಹದ ಆರೋಗ್ಯಕ್ಕೆ ವಿಟಮಿನ್ ಸಿ ತುಂಬಾ ಅವಶ್ಯಕವಾದದ್ದು. ವಿಟಮಿನ್ ಸಿ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ಶೀತ, ಕೆಮ್ಮು ಕೂಡ ಕಡಿಮೆಯಾಗುತ್ತದೆ. ಜತೆಗೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂಳೆಯ ಸದೃಢಕ್ಕೆ ಕೂಡ ಇದು ಸಹಾಯಕಾರಿ. ವಿಟಮಿನ್ ಸಿ ಯಾವ ಆಹಾರದಲ್ಲಿ ಹೆಚ್ಚಿದೆ ಎಂದು ಇಲ್ಲಿದೆ ನೋಡಿ ಮಾಹಿತಿ.
ಹಳದಿ ಬಣ್ಣದ ಬೆಲ್ ಪೆಪ್ಪರ್: ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. 100 ಗ್ರಾಂ ಬೆಲ್ ಪೆಪ್ಪರ್ ನಲ್ಲಿ 180ರಿಂದ 185 ಎಂಜಿ ಯಷ್ಟು ಸಿ ವಿಟಮಿನ್ ಇದೆ.ಇದನ್ನು ನಿಮ್ಮ ಡಯೆಟ್ ಪ್ಲ್ಯಾನ್ ಗೆ ಕೂಡ ಸೇರಿಸಿಕೊಳ್ಳಿ. ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಸೀಬೆ ಹಣ್ಣಿನಲ್ಲಿಯೂ ಕೂಡ ವಿಟಮಿನ್ ಸಿ ಅಧಿಕವಾಗಿದೆ. ದಿನಾ ಒಂದು ಸೀಬೆ ಹಣ್ಣು ತಿಂದರೆ ನಿಮ್ಮ ದೇಹಕ್ಕೆ ವಿಟಮಿನ್ ಸಿ ಸಿಗುತ್ತದೆ. ಇದು ನಿಮ್ಮ ಕಣ್ಣು, ಕೂದಲಿನ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು.
ಸ್ಟ್ರಾಬೆರ್ರಿ, ಬ್ಲ್ಯಾಕ್ ಬೆರ್ರಿ ಹಣ್ಣುಗಳಲ್ಲೂ ವಿಟಮಿನ್ ಸಿ ಇದೆ. 1 ಕಪ್ ಸ್ಟ್ರಾಬೆರಿ ಹಣ್ಣಿನಲ್ಲಿ ಸರಿ ಸುಮಾರು 95-97 ಎಂ.ಜಿ ಯಷ್ಟು ವಿಟಮಿನ್ ಸಿ ಇದೆ.
ಕಿವಿ ಹಣ್ಣಿನಲ್ಲಿಯೂ ಕೂಡ ವಿಟಮಿನ್ ಸಿ ಇದೆ. ಹಾಗೇ ಕಿತ್ತಳೆ ಹಣ್ಣು ಸೇವಿಸುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಸಿ ದೊರಕುತ್ತದೆ. ಕಿತ್ತಳೆ ಹಣ್ಣಿನಲ್ಲಿ ನಾರಿನಾಂಶ ಹಾಗೆ ಆ್ಯಂಟಿ ಆಕ್ಸಿಡೆಂಟ್ ಕೂಡ ಇದೆ. ಇದು ಜೀರ್ಣಕ್ರಿಯೆಗೆ ಸಹಾಯಕಾರಿಯಾಗಿದೆ.
ಫೈನಾಪಲ್ ಹಣ್ಣಿನಲ್ಲಿ ಕೂಡ ವಿಟಮಿನ್ ಸಿ ಹೇರಳವಾಗಿದೆ. ಇದನ್ನು ಸೇವಿಸುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಣ್ಣು ಹಾಗೂ ಹೃದಯದ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು.