ವಾಸ್ತು ಶಾಸ್ತ್ರದ ಪ್ರಕಾರ, ವಾಸ್ತು ಇಲ್ಲದೆ ಯಾವುದೇ ಮನೆಯನ್ನು ನಿರ್ಮಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಮನೆ ನೋಡಲು ಎಷ್ಟೇ ಅಂದವಾಗಿದ್ದರೂ ವಾಸ್ತುದೋಷವಿದ್ದರೆ ಆ ಮನೆಯಲ್ಲಿ ವಾಸ ಮಾಡಿದ್ರೆ ಅನಾರೋಗ್ಯ ಅಥವಾ ಇನ್ನಿತರೆ ತೊಂದರೆ ಉಂಟಾಗಬಹುದು. ಇದಕ್ಕಾಗಿ ಮನೆ ಕಟ್ಟುವಾಗಲೇ ವಾಸ್ತು ಪ್ರಕಾರ ನಿರ್ಮಿಸಿದರೆ ಒಳಿತು.
ಈ ವಾಸ್ತು ಶಾಸ್ತ್ರದ ತತ್ವಗಳನ್ನು ಮನೆಯಲ್ಲಿ ಮಾತ್ರವಲ್ಲದೆ ವ್ಯಾಪಾರಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿಯೂ ಅನ್ವಯಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಕಚೇರಿ, ಕಾರ್ಖಾನೆ ಅಥವಾ ಅಂಗಡಿಯಲ್ಲಿ ವಾಸ್ತು ತತ್ವಗಳನ್ನು ಬಳಸಬಹುದು. ಇದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಮಾಡಲಾಗಿದೆ. ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ದೋಷಗಳು ದೂರವಾಗುವುದಲ್ಲದೆ, ಪ್ರಗತಿಯ ಹೊಸ ಸಾಧ್ಯತೆಗಳೂ ಸೃಷ್ಟಿಯಾಗುತ್ತವೆ. ಅಷ್ಟೇ ಅಲ್ಲದೆ, ಆರ್ಥಿಕ ಸಂಕಷ್ಟವೂ ದೂರವಾಗುತ್ತದೆ. ಹಾಗಿದ್ದರೆ ಯಾವ್ಯಾವ ನಿಯಮಗಳಿವೆ ಎಂಬುದನ್ನು ಇಲ್ಲಿ ತಿಳಿಯಿರಿ.
– ಅಂಗಡಿಯನ್ನು ಹೊಂದಿದ್ದವರು, ಅದರಲ್ಲಿರುವ ಸರಕುಗಳಿಗಾಗಿ ಮಾಡಿದ ವಾರ್ಡ್ ರೋಬ್ ದಿಕ್ಕಿನ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ವಾಸ್ತು ಪ್ರಕಾರ, ವಾಯುವ್ಯ ದಿಕ್ಕಿನಲ್ಲಿ ಅಂಗಡಿಯ ಬೀರು ಮಾಡುವುದು ಮಂಗಳಕರ. ಹೀಗೆ ಮಾಡುವುದರಿಂದ ಲಾಭವನ್ನು ಪಡೆಯುವುದರ ಜೊತೆಗೆ ವ್ಯವಹಾರದಲ್ಲಿಯೂ ಪ್ರಗತಿಯನ್ನು ಪಡೆಯಬಹುದು.
– ವ್ಯಾಪಾರದಲ್ಲಿ ಪ್ರಗತಿಯನ್ನು ಪಡೆಯಲು, ಅಂಗಡಿ ಅಥವಾ ಶೋರೂಮ್‌ನ ಮುಖ್ಯ ಬಾಗಿಲು ಯಾವಾಗಲೂ ಮಧ್ಯದಲ್ಲಿರಬೇಕು.
– ದೇವರ ಫೋಟೋವನ್ನು ಯಾವಾಗಲೂ ವ್ಯಾಪಾರದ ಸ್ಥಳದ ಈಶಾನ್ಯ ಮೂಲೆಯಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಪ್ರಾಪ್ತವಾಗುತ್ತದೆ ಮತ್ತು ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ ಎಂದು ನಂಬಲಾಗಿದೆ.
– ಮನೆಯಲ್ಲಿರುವಂತೆ ಅಂಗಡಿ ಅಥವಾ ಕಚೇರಿಯಲ್ಲಿ ತಿಳಿ ಬಣ್ಣಗಳನ್ನು ಬಳಸಬೇಕು ಎಂದು ನಂಬಲಾಗಿದೆ. ಇದರಿಂದ ಸಕಾರಾತ್ಮಕತೆ ಹರಡುತ್ತದೆ.
– ವ್ಯಾಪಾರದಲ್ಲಿ ಲಾಭ ಮತ್ತು ಪ್ರಗತಿಗಾಗಿ, ಅಂಗಡಿ ಅಥವಾ ಕಛೇರಿಯಲ್ಲಿ ಪಾಂಚಜನ್ಯ ಶಂಖವನ್ನು ಸ್ಥಾಪಿಸುವುದು ಒಳಿತು. ಇದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಸಂತೋಷಪಡಿಸುತ್ತದೆ.