ವಾಸ್ತು ಪ್ರಕಾರ, ದೇವರ ಚಿತ್ರಗಳನ್ನು ಮನೆಯಲ್ಲಿ ಇಡುವುದು ಶುಭ. ದೇವರ ವಿಭಿನ್ನ ಚಿತ್ರಗಳ ಪ್ರಾಮುಖ್ಯತೆಯೂ ವಿಭಿನ್ನವಾಗಿದೆ. ಶ್ರೀ ಕೃಷ್ಣನ ವಿವಿಧ ರೂಪಗಳು ಸ್ಪೂರ್ತಿದಾಯಕವಾಗಿವೆ.
ಮನೆಯ ಈಶಾನ್ಯ ದಿಕ್ಕಿನಲ್ಲಿ ಲಡ್ಡು ಗೋಪಾಲನ ಫೋಟೋವನ್ನು ಹಾಕುವುದ್ರಿಂದ ಮನೆಯಲ್ಲಿ ಪ್ರೀತಿ ತುಂಬಿರುತ್ತದೆ. ಮನೆಯಲ್ಲಿ 12 ವರ್ಷ ವಯಸ್ಸಿನ ಮಕ್ಕಳಿದ್ದರೆ ಬಾಲ ಗೋಪಾಲನ ಫೋಟೋವನ್ನು ಹಾಕಿ. ಇದು ಮಕ್ಕಳ ನೆನಪಿನ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ಮನೆ ಪೂರ್ವದಲ್ಲಿ ಕೃಷ್ಣನ ಗೋಪಾಲ ರೂಪದ ಚಿತ್ರವನ್ನು ಹಾಕಿ. ಇದು ಸಂಪತ್ತು, ಧಾನ್ಯ ಮತ್ತು ಧರ್ಮವನ್ನು ನೀಡಬಲ್ಲದು.
ಆಗ್ನೇಯ ದಿಕ್ಕಿನಲ್ಲಿ ವಿರಾಟ ರೂಪದ ಫೋಟೋವನ್ನು ಹಾಕಿ. ಇದು ಶಕ್ತಿಯ ಸೂಚಕವಾಗಿದೆ. ದಕ್ಷಿಣ ದಿಕ್ಕಿನಲ್ಲಿ ಗೋವರ್ಧನ ಪರ್ವತವನ್ನು ಮೇಲಕ್ಕೆತ್ತಿದ ಕೃಷ್ಣನ ಫೋಟೋವನ್ನು ಹಾಕಿ. ಇದು ರಕ್ಷಣೆಯ ಸಂಕೇತವಾಗಿದೆ. ಸುರಕ್ಷಿತ ಮತ್ತು ಆರಾಮದಾಯಕ ಜೀವನಕ್ಕೆ ಇದು ಸಹಕಾರಿ.