alex Certify ʼವಾಟ್ಸಾಪ್‌ʼ ಹೊರತಂದಿದೆ ಬಳಕೆದಾರರನ್ನು ಖುಷಿಪಡಿಸುವಂಥ ಹೊಸ ಫೀಚರ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಾಟ್ಸಾಪ್‌ʼ ಹೊರತಂದಿದೆ ಬಳಕೆದಾರರನ್ನು ಖುಷಿಪಡಿಸುವಂಥ ಹೊಸ ಫೀಚರ್‌….!

ವಾಟ್ಸಾಪ್‌ನಲ್ಲಿ ಹೊಸ ಹೊಸ ಫೀಚರ್‌ಗಳು ಬರುತ್ತಲೇ ಇರುತ್ತವೆ. ಈ ಮೂಲಕ ಬಳಕೆದಾರರನ್ನು ಖುಷಿಪಡಿಸುತ್ತೆ ಈ ಮೆಸೇಜಿಂಗ್‌ ಅಪ್ಲಿಕೇಶನ್‌. ಈ ವರ್ಷ ಕೂಡ ವಾಟ್ಸಾಪ್‌ನಲ್ಲಿ ಸಾಕಷ್ಟು ವಿಶಿಷ್ಟವಾದ ಫೀಚರ್‌ಗಳನ್ನು ಪರಿಚಯಿಸಲಾಗಿದೆ.

ಇದು ಬಳಕೆದಾರರ ಕೆಲಸವನ್ನು ಇನ್ನಷ್ಟು ಸುಲಭಗೊಳಿಸಿದೆ. ಇದೀಗ WhatsApp Google Play ಬೀಟಾ ಪ್ರೋಗ್ರಾಂ ಮೂಲಕ ಹೊಸ ನವೀಕರಣವನ್ನು ಹೊರತರುತ್ತಿದೆ. ಕೆಲವು ಬೀಟಾ ಪರೀಕ್ಷಕರಿಗೆ WhatsApp ಹೊಸ ಕ್ಯಾಮರಾ ಮೋಡ್ ಅನ್ನು ಪರಿಚಯಿಸ್ತಾ ಇದೆ.

WABetaInfo ವಾಟ್ಸಾಪ್‌ನಲ್ಲಿ ಹೊಸ ಕ್ಯಾಮೆರಾ ಮೋಡ್ ಕುರಿತು ಮಾಹಿತಿ ನೀಡಿದೆ. WABetaInfo ಸ್ಕ್ರೀನ್‌ಶಾಟ್ ಕೂಡ ಹಂಚಿಕೊಂಡಿರೋದ್ರಿಂದ ಬಳಕೆದಾರರು ಈ ಅಪ್ಡೇಟ್‌ಗಾಗಿ ಉತ್ಸುಕರಾಗಿದ್ದಾರೆ. ಸ್ಕ್ರೀನ್‌ಶಾಟ್‌ನಲ್ಲಿ WhatsApp ಇನ್-ಆಪ್ ಕ್ಯಾಮೆರಾವನ್ನು ಮರುವಿನ್ಯಾಸಗೊಳಿಸಿರುವುದನ್ನು ನೀವು ನೋಡಬಹುದು.

ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಹೊಸ ಐಕಾನ್‌ಗಳನ್ನು ಸಹ ಪಡೆಯಬಹುದು. ಈ ಫೀಚರ್‌ ಅನ್ನು ಪರಿಚಯಿಸಿದ ನಂತರ ಬಳಕೆದಾರರು ಫೋಟೋದಿಂದ ವೀಡಿಯೊಗೆ ಮತ್ತು ವೀಡಿಯೊದಿಂದ ಫೋಟೋ ಮೋಡ್‌ಗೆ ತಕ್ಷಣವೇ ಬದಲಾಯಿಸಲು ಸಾಧ್ಯವಾಗುತ್ತದೆ.

WhatsApp ನಲ್ಲಿ ವೀಡಿಯೊವನ್ನು ಶೂಟ್ ಮಾಡಲು, ನೀವು ಅಪ್ಲಿಕೇಶನ್‌ನ ಕೆಳಭಾಗದ ಮಧ್ಯದಲ್ಲಿ ನೀಡಲಾದ ಬಟನ್ ಅನ್ನು ಒತ್ತಿ ಹಿಡಿದಿಟ್ಟುಕೊಳ್ಳಬೇಕು. WhatsApp ಹಿಂದಿನ ಆವೃತ್ತಿಗಳಲ್ಲಿ ನೀವು ವೀಡಿಯೊವನ್ನು ರೆಕಾರ್ಡ್ ಮಾಡಲು ಟ್ಯಾಪ್ ಮಾಡಿ ಹಿಡಿದಿಟ್ಟುಕೊಳ್ಳಬೇಕು. ಹೊಸ ಫೀಚರ್‌ ಬಂದ ಬಳಿಕ ವೀಡಿಯೊವನ್ನು ರೆಕಾರ್ಡ್ ಮಾಡಲು ಟ್ಯಾಪ್ ಮಾಡಿ ಹಿಡಿದಿಟ್ಟುಕೊಳ್ಳುವ ಅಗತ್ಯವಿಲ್ಲ. ವಿಡಿಯೋ ಮೋಡ್‌ಗೆ ಸುಲಭವಾಗಿ ಬದಲಾಯಿಸಬಹುದು. ಇದು ವೀಡಿಯೊ ರೆಕಾರ್ಡಿಂಗ್ ಅನ್ನು ಸುಲಭಗೊಳಿಸುತ್ತದೆ. ಹೊಸ ಕ್ಯಾಮೆರಾ ಮೋಡ್ ಅನ್ನು ಹೆಚ್ಚಿನ ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಹೊಸ ಬಳಕೆದಾರರಿಗೂ ಇದು ಲಭ್ಯವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...