ಕರಬೂಜ ಹಣ್ಣು ಕಲ್ಲಂಗಡಿಯಂತೆ ಬಲು ಸಿಹಿ ಹಾಗೂ ನೀರಿನಾಂಶವನ್ನು ಒಳಗೊಂಡಿದೆ. ಇದರಿಂದ ನಿರ್ಜಲೀಕರಣದ ಸಮಸ್ಯೆಯನ್ನು ತಡೆಗಟ್ಟಬಹುದು. ಇದರಲ್ಲಿ ಕ್ಯಾಲರಿಯೂ ಕಡಿಮೆ ಇರುವ ಕಾರಣ ಇದು ಕೊಬ್ಬು ಹೆಚ್ಚಿಸದೆ ದೇಹದಾರೋಗ್ಯವನ್ನು ಹೆಚ್ಚಿಸುತ್ತದೆ.
ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅಂಶವಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ಇದರ ಸೇವನೆಯಿಂದ ಬಿಳಿ ರಕ್ತಕಣಗಳು ಹೆಚ್ಚಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಮಧುಮೇಹಿಗಳೂ ಇದನ್ನು ಸೇವಿಸಬಹುದಾಗಿದ್ದು, ಇದು ದೇಹದಲ್ಲಿರುವ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ. ವೈದ್ಯರೂ ಇದರ ರಸ ಸೇವಿಸಲು ಸೂಚಿಸುತ್ತಾರೆ.
ಕಿಡ್ನಿ ಸಮಸ್ಯೆಗೆ ಇದು ರಾಮಬಾಣ. ಅಲರ್ಜಿ ಸಮಸ್ಯೆಯನ್ನು ದೂರ ಮಾಡುತ್ತದೆ. ನಿತ್ಯ ಸೇವಿಸುವುದರಿಂದ ಸಂಧಿವಾತವನ್ನು ಇಲ್ಲವಾಗಿಸಬಹುದು. ಜೀರ್ಣ ಕ್ರಿಯೆಯನ್ನು ಪ್ರೇರೇಪಿಸುವ ಇದು ಅಸಿಡಿಟಿ ಸಮಸ್ಯೆಯನ್ನು ದೂರಮಾಡುತ್ತದೆ.
ತ್ವಚೆಯನ್ನು ಮತ್ತಷ್ಟು ಹೊಳೆಯುವಂತೆ ಮಾಡುವುದರೊಂದಿಗೆ ದೇಹತೂಕವನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರು ಇದನ್ನು ನಿತ್ಯ ಸೇವಿಸುವುದು ಬಹಳ ಒಳ್ಳೆಯದು. ಮಲಬದ್ಧತೆ ಸಮಸ್ಯೆಯನ್ನು ಇದು ದೂರಮಾಡುತ್ತದೆ.