ಅನ್ನ 1 ಬೌಲ್
ತುರಿದ ಮಾವಿನಕಾಯಿ ಸ್ವಲ್ಪ
ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು
ಒಣಕೊಬ್ಬರಿ 1 ಟೀ ಸ್ಪೂನ್
ಬಿಳಿ ಎಳ್ಳು 1/4 ಟೀ ಸ್ಪೂನ್
ಜೀರಿಗೆ 1/4 ಟೀ ಸ್ಪೂನ್
ಮೆಂತ್ಯ 1/4 ಟೀ ಸ್ಪೂನ್
ಉದ್ದಿನಬೇಳೆ 1/4 ಟೀ ಸ್ಪೂನ್
ಕಡಲೆಬೇಳೆ 1/4 ಟೀ ಸ್ಪೂನ್
ಕಾಳುಮೆಣಸು ಸ್ವಲ್ಪ
ಒಣ ಮೆಣಸಿನ ಕಾಯಿ 4-5
ಕರಿಬೇವು ಸ್ವಲ್ಪ
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು
ಬಿಳಿ ಎಳ್ಳು 1/4 ಟೀ ಸ್ಪೂನ್
ಒಣಮೆಣಸಿನಕಾಯಿ 2
ಕರಿಬೇವು ಸ್ವಲ್ಪ
ಇಂಗು ಚಿಟಿಕೆ
ಕಡಲೆ ಬೇಳೆ ಸ್ವಲ್ಪ
ಉದ್ದಿನ ಬೇಳೆ ಸ್ವಲ್ಪ
ಕಡಲೆ ಬೀಜ ಸ್ವಲ್ಪ
ಅರಿಶಿಣ ಸ್ವಲ್ಪ
ಸಾಸಿವೆ ಸ್ವಲ್ಪ
ಎಣ್ಣೆ 3 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು (ಸಣ್ಣದಾಗಿ ಹೆಚ್ಚಿ ನೀರಿನಲ್ಲಿ ನೆನೆ ಹಾಕಿರಬೇಕು)
ಮಾಡುವ ವಿಧಾನ
ಮೊದಲು ಬಾಣಲೆಗೆ ಒಣಕೊಬ್ಬರಿ, ಬಿಳಿ ಎಳ್ಳು, ಜೀರಿಗೆ, ಮೆಂತ್ಯ, ಉದ್ದಿನಬೇಳೆ, ಕಡಲೆಬೇಳೆ, ಕಾಳುಮೆಣಸು, ಒಣ ಮೆಣಸಿನಕಾಯಿ, ಕರಿಬೇವು ಎಲ್ಲವನ್ನೂ ಸೇರಿಸಿ ಚೆನ್ನಾಗಿ ಹುರಿಯಬೇಕು. ತಣ್ಣಗಾದ ನಂತರ ಮಿಕ್ಸಿಯಲ್ಲಿ ರುಬ್ಬಿ ಪುಡಿ ಮಾಡಿಕೊಳ್ಳಬೇಕು. ನಂತರ ಅದೇ ಮಿಕ್ಸಿಗೆ ತುರಿದ ಮಾವಿನ ಕಾಯಿ ಹಾಗೂ ಸ್ವಲ್ಪ ನೀರು ಸೇರಿಸಿ ಮತ್ತೆ ರುಬ್ಬಿಕೊಂಡು ಮಿಶ್ರಣ ತಯಾರಿಸಿಕೊಳ್ಳಬೇಕು.
ಬಳಿಕ ಒಗ್ಗರಣೆ ಮಾಡಲು ಬಾಣಲಿಗೆ ಎಣ್ಣೆ, ಸಾಸಿವೆ, ಒಣ ಮೆಣಸು, ಕಡಲೆ ಬೇಳೆ, ಕಡಲೆಬೀಜ, ಉದ್ದಿನ ಬೇಳೆ ಹಾಕಿ ಬೇಯಿಸಬೇಕು. ಬೆಂದ ನಂತರ ಬಿಳಿ ಎಳ್ಳು, ಅರಿಶಿಣ, ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ. ಮಿಶ್ರಣ ಬೆಂದ ಮೇಲೆ ಕರಿ ಬೇವು ಹಾಕಿ ಕೈಯಾಡಿಸಿ.
ನಂತರ ಉಪ್ಪು, ಅನ್ನ ಹಾಕಿ ಕಲಸಿಕೊಳ್ಳಬೇಕು. ಬಳಿಕ ನೆನೆಸಿದ್ದ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ನೀರು ತೆಗೆದು ಹಾಕಿ. ಇದರಿಂದ ಕೊತ್ತಂಬರಿ ಸೊಪ್ಪಿನ ಫ್ಲೇವರ್ ಹಾಗೇ ಉಳಿಯುವುದು. ಈಗ ಬಿಸಿ ಬಿಸಿ ರುಚಿ ರುಚಿ ಮಾವಿನಕಾಯಿ ಪುಳಿಯೋಗರೆ ಟೇಸ್ಟ್ ಮಾಡಲು ಸಿದ್ಧ.