ಅಧರಕ್ಕೆ ಕಹಿ, ಉದರಕ್ಕೆ ಸಿಹಿ ಬೇವು. ಬೇವಿನಲ್ಲಿ ಅನೇಕ ಔಷಧೀಯ ಗುಣಗಳಿವೆ. ಬೇವಿನ ಕಹಿ ಜೀವನದ ಕಷ್ಟ ಕಾರ್ಪಣ್ಯಗಳಿಗೆ ಅನ್ವರ್ಥವಾದರೂ ಇದರಲ್ಲಿ ದೇಹಕ್ಕೆ ಉಪಕಾರಿಯಾಗುವ ಅನೇಕ ಔಷಧೀಯ ಗುಣಗಳಿವೆ.
ಆಗ ತಾನೇ ಕಿತ್ತು ತಂದ ಬೇವಿನ ಎಲೆಯನ್ನು ಮೊಸರಿನಲ್ಲಿ ಅರೆದು, ಹುಳುಕಡ್ಡಿಯ ಮೇಲೆ ಲೇಪನ ಮಾಡುವುದರಿಂದ ಬಹಳ ಬೇಗ ಹುಳುಕಡ್ಡಿ ಮಾಯವಾಗುತ್ತದೆ.
ಬೇವಿನ ಸೊಪ್ಪಿನ ರಸದ ಜೊತೆ, ಜೇನು ತುಪ್ಪವನ್ನು ಬೆರೆಸಿ ಸ್ವಲ್ಪ ಬಿಸಿ ಮಾಡಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ವಾಸಿಯಾಗುತ್ತದೆ.
ಬೇವಿನ ಸೊಪ್ಪನ್ನು ನೀರಿನಲ್ಲಿ ಕುದಿಸಿ, ಆ ನೀರಿನಿಂದ ತಲೆ ಸ್ನಾನ ಮಾಡಿದರೆ ಹೊಟ್ಟಿನ ಸಮಸ್ಯೆ ನಿವಾರಣೆ ಆಗಿ ಕೂದಲು ಉದುರುವುದು ನಿಲ್ಲುತ್ತದೆ.