ಕೆಲವರಿಗೆ ಮೊಣಕೈ ಅಷ್ಟೇ ಕಪ್ಪಾಗಿ ಹೋಗಿರುತ್ತದೆ. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಮನೆಯಲ್ಲಿ ಸಿಗುವ ಕೆಲವು ವಸ್ತುಗಳಿಂದ ಇದನ್ನು ದೂರ ಮಾಡಿಕೊಳ್ಳಬಹುದು. ಹೇಗೆ ಅಂತ ನೀವು ತಿಳಿಯಿರಿ.
* ಪ್ರತಿದಿನ ಸ್ನಾನಕ್ಕೆ ಮುನ್ನ ನಿಂಬೆ ರಸ ಹಚ್ಚಿ 10 ನಿಮಿಷಗಳ ಹಾಗೆಯೇ ಬಿಡಬೇಕು.
* ಒಂದು ಟೀ ಸ್ಪೂನ್ ಕೊಬ್ಬರಿ ಎಣ್ಣೆ, ಅರ್ಧ ಟೀ ಸ್ಪೂನ್ ನಿಂಬೆ ರಸ ಮಿಶ್ರಣ ಮಾಡಿ ಮೊಣಕೈಗಳು ಮೊಣಕಾಲುಗಳಿಗೆ ಲೇಪಿಸಿ ಬಿಸಿಯಾದ ನೀರಿನಲ್ಲಿ ಅದ್ದಿದ ಟವಲ್ ನಿಂದ ಒರೆಸಿಕೊಳ್ಳಬೇಕು.
* 2 ಟೀ ಸ್ಪೂನ್ ಆಲಿವ್ ಎಣ್ಣೆ, 1 ಟೀ ಸ್ಪೂನ್ ಸಕ್ಕರೆ ಮಿಶ್ರಣ ಮಾಡಿ ಮೊಣಕಾಲು, ಮೊಣಕೈಗಳಿಗೆ ಹಚ್ಚಿ ಉಜ್ಜುವುದರಿಂದ ಕಪ್ಪು ಕಡಿಮೆಯಾಗುತ್ತದೆ.
* 2 ಟೀ ಸ್ಪೂನ್ ಮೊಸರಿನಲ್ಲಿ ಸ್ವಲ್ಪ ಬಾದಾಮಿ ಪುಡಿ ಮಿಶ್ರಣ ಮಾಡಿ ಕಪ್ಪಾಗಿರುವ ಕಡೆ ಹಚ್ಚಿ ಶುಭ್ರಗೊಳಿಸಿಕೊಳ್ಳಬೇಕು.
* ಹಾಲು ಕೆನೆಯಲ್ಲಿ ಒಂದು ಚಿಟಿಕೆ ಅರಿಶಿಣ ಮಿಶ್ರಣ ಮಾಡಿ ಕಪ್ಪಗಿರುವ ಕಡೆ ಹಚ್ಚಿ ಸ್ವಚ್ಛಗೊಳಿಸಿಕೊಳ್ಳಬೇಕು.
* ಟೊಮೆಟೊ ರಸ ಇಲ್ಲವೇ ದಾಳಿಂಬೆ ರಸ, ಜೇನು ಅಥವಾ ಎಣ್ಣೆಯಿಂದ ಮಿಶ್ರಣ ಮಾಡಿ ಮೊಣಕೈ, ಮೊಣಕಾಲುಗಳಿಗೆ ಹಚ್ಚಿ ಉಜ್ಜಿ ಸ್ವಚ್ಛಗೊಳಿಸಿಕೊಳ್ಳುವುದರಿಂದ ಕಪ್ಪು ದೂರವಾಗುತ್ತದೆ.
* ಎಳ್ಳೆಣ್ಣೆಗೆ ಚರ್ಮ ಮೃದುವಾಗಿಡುವ ಗುಣವಿದೆ. ವಾರಕ್ಕೊಮ್ಮೆ ಸ್ನಾನಕ್ಕೆ ಎಳ್ಳೆಣ್ಣೆ ಬಳಕೆ ಮಾಡುವುದರಿಂದ ಚರ್ಮಕ್ಕೆ ಬೇಕಾದ ಫ್ಯಾಟಿ ಆಸಿಡ್ ದೊರಕಿ ಮೃದುವಾಗಿ ಬದಲಾಗುತ್ತದೆ.