ಮುಖ, ಕೂದಲು, ಪಾದದ ಸೌಂದರ್ಯದ ಬಗ್ಗೆ ನಾವು ಹೆಚ್ಚಿನ ಗಮನ ನೀಡ್ತೇವೆ. ಆದ್ರೆ ಮೊಣಕೈ ಹಾಗೂ ಮೊಣಕಾಲನ್ನು ನಿರ್ಲಕ್ಷ್ಯಿಸ್ತೇವೆ. ಮೊಣಕೈ ಹಾಗೂ ಮೊಣಕಾಲು ಜಿಡ್ಡುಗಟ್ಟಿದಂತಾಗಿ ಕಪ್ಪಗೆ ಕಾಣಿಸುತ್ತದೆ. ಸುಂದರ ಡ್ರೆಸ್ ತೊಟ್ಟಾಗ ಇದು ನಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕಿಯಂತಾಗುತ್ತದೆ. ಅನೇಕರು ಇದೇ ಕಾರಣಕ್ಕೆ ಶಾರ್ಟ್ ಸ್ಕರ್ಟ್ ಹಾಕೋದಿಲ್ಲ. ಫುಲ್ ಸ್ಲೀವ್ ಇರುವ ಡ್ರೆಸ್ ಇಷ್ಟಪಡ್ತಾರೆ.
ಮೊಣಕೈ ಹಾಗೂ ಮೊಣಕಾಲು ಕಪ್ಪಾಗಿದೆ ಎನ್ನುವ ಕಾರಣಕ್ಕೆ ನೀವು ಮುಜುಗರಪಟ್ಟುಕೊಳ್ಳಬೇಕಾಗಿಲ್ಲ. ಮನೆ ಮದ್ದಿನ ಮೂಲಕ ಕೆಲವೇ ದಿನಗಳಲ್ಲಿ ಮೊಣಕೈ ಹಾಗೂ ಮೊಣಕಾಲಿನ ಸೌಂದರ್ಯವನ್ನು ನೀವು ಹೆಚ್ಚಿಸಿಕೊಳ್ಳಬಹುದು.
ಸೌತೆಕಾಯಿಯ 3-4 ಚೂರುಗಳನ್ನು ತೆಗೆದುಕೊಳ್ಳಿ. ಅದನ್ನು ಮೊಣಕೈ ಹಾಗೂ ಮೊಣಕಾಲಿಗೆ ಹಾಕಿ 10-15 ನಿಮಿಷ ಸರಿಯಾಗಿ ಉಜ್ಜಿ. ಐದು ನಿಮಿಷ ಬಿಟ್ಟು ತಣ್ಣನೆಯ ನೀರಿನಲ್ಲಿ ತೊಳೆಯಿರಿ.
ನಂತ್ರ ಒಂದು ಪಾತ್ರೆಗೆ ಅಡುಗೆ ಸೋಡಾ ಹಾಕಿ. ಅದಕ್ಕೆ ಸ್ವಲ್ಪ ಹಾಲನ್ನು ಹಾಕಿ. ಇದನ್ನು ಮೊಣಕೈ ಹಾಗೂ ಮೊಣಕಾಲಿನ ಕಪ್ಪು ಕಲೆಗೆ ಹಾಕಿ ಮೃದುವಾಗಿ ಉಜ್ಜಿ. ಇದನ್ನು ತೊಳೆದ ನಂತ್ರ 2 ಚಮಚ ಈರುಳ್ಳಿ ರಸ, 2 ಚಮಚ ಲಿಂಬೆ ರಸ, ಅರ್ಧ ಚಮಚ ಜೇನುತುಪ್ಪ ಹಾಗೂ ಒಂದು ಚಮಚ ಕಡಲೆ ಹಿಟ್ಟನ್ನು ಮಿಕ್ಸ್ ಮಾಡಿ ಇದನ್ನು ಮೊಣಕೈ ಹಾಗೂ ಮೊಣಕಾಲಿಗೆ ಹಚ್ಚಿ. ಇದನ್ನು ಮೂರು ನಾಲ್ಕು ದಿನ ಟ್ರೈ ಮಾಡಿ. ಸುಂದರ ಮೊಣಕೈ-ಮೊಣಕಾಲು ನಿಮ್ಮದಾಗಿಸಿಕೊಳ್ಳಿ.