
ನಮ್ಮ ದೇಹದ ಇತರ ಭಾಗಗಳಂತೆ ಚರ್ಮಕ್ಕೂ ವಿಶೇಷ ಪೋಷಕಾಂಶಗಳ ಅಗತ್ಯವಿದೆ. ಚರ್ಮದ ಆರೋಗ್ಯ ರಕ್ಷಣೆಗೆ ಅಂಟಿ ಅಕ್ಸಿಡೆಂಟ್ ಗಳು, ಒಮೆಗಾ 3, ಕೊಬ್ಬಿನಾಮ್ಲಗಳು ಬಹಳ ಮುಖ್ಯ. ತೆಂಗಿನ ಹಾಲು ಹಾಗೂ ಅರಶಿನದಿಂದ ತಯಾರಿಸಿದ ಪಾನೀಯವೊಂದರ ಮೂಲಕ ನಿಮ್ಮ ತ್ವಚೆ ಸದಾ ಯೌವ್ವನದಿಂದ ಇರುವಂತೆ ಮಾಡಬಹುದು. ಇದನ್ನು ತಯಾರಿಸುವುದು ಹೇಗೆಂದು ನೋಡೋಣ.
ಮೊದಲಿಗೆ ಎರಡು ಬಾಳೆಹಣ್ಣು ಮತ್ತು ಅನಾನಾಸನ್ನು ಕತ್ತರಿಸಿ. ಶುಂಠಿ, ತೆಂಗಿನೆಣ್ಣೆ, ದಾಲ್ಚಿನಿ ಪುಡಿ, ಅರಶಿನ ಪುಡಿ ಮತ್ತು ಅಗಸೆ ಬೀಜಕ್ಕೆ ಸೇರಿಸಿ. ದಪ್ಪಗಿನ ಅರ್ಧ ಕಪ್ ತೆಂಗಿನ ಹಾಲು ಬೆರೆಸಿ. ಇವೆಲ್ಲವನ್ನೂ ಬ್ಲೆಂಡರ್ ಮೂಲಕ ಮಿಶ್ರಣ ಮಾಡಿ. ಸಿಹಿ ಬೇಕಿದ್ದರೆ ಸ್ವಲ್ಪ ಜೇನುತುಪ್ಪ ಸೇರಿಸಿ ಈ ಪಾನೀಯವನ್ನು ಕುಡಿಯಿರಿ.
ಈ ಎಲ್ಲಾ ಸಾಮಾಗ್ರಿಗಳು ನಿಮ್ಮ ಚರ್ಮದ ಅರೋಗ್ಯವನ್ನು ಸುಧಾರಿಸುತ್ತವೆ. ತೆಂಗಿನ ಹಾಲಿನಲ್ಲಿ ಆರೋಗ್ಯಕರ ಕೊಬ್ಬು ಇದೆ. ಅಗಸೆ ಬೀಜ ಒಮೆಗಾವನ್ನು ಒದಗಿಸುತ್ತದೆ. ಶುಂಠಿ ಮತ್ತು ಅರಿಶಿನ ಉರಿಯೂತದ ವಿರುದ್ಧ ಹೋರಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೊಡವೆ ಮುಕ್ತ ತ್ವಚೆ ನಿಮ್ಮದಾಗಬೇಕಾದರೆ ಇಂದೇ ಈ ಪಾನೀಯವನ್ನು ಸೇವಿಸಿ.