ತಲೆಕೂದಲು ಬಿಳಿಯಾಗುತ್ತಿದೆಯೇ, ಚಿಂತೆ ಬೇಡ. ಮೆಹಂದಿ ಹಾಕಿ, ಕೆಂಬಣ್ಣಕ್ಕೆ ಬರುವ ನಿಮ್ಮ ತಲೆಕೂದಲಿನಿಂದ ಸ್ಟೈಲಿಶ್ ಆಗಿ ಕಾಣಿ.
ಮೆಹಂದಿ ಸೊಪ್ಪಿನಿಂದ ಹಲವಾರು ಪ್ರಯೋಜನಗಳಿವೆ. ವಾರಕ್ಕೊಮ್ಮೆ ಮೆಹಂದಿ ಸೊಪ್ಪಿನ ಪೇಸ್ಟ್ ಅನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಬಳಿಕ ಸ್ನಾನ ಮಾಡುವುದರಿಂದ ತಲೆ ಹಾಗು ದೇಹ ತಂಪಾಗಿರುತ್ತದೆ.
ಮಹಂದಿ ಸೊಪ್ಪಿಗೆ ಬೀಟ್ ರೂಟ್ ಸೇರಿಸಿ ಮಿಕ್ಸಿ ಮಾಡಿ ಅದನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ಸ್ನಾನ ಮಾಡಿದರೆ ತಲೆಕೂದಲು ಕೆಂಪುಬಣ್ಣಕ್ಕೆ ತಿರುಗುತ್ತದೆ. ಅಲ್ಲದೆ ತಲೆಯಲ್ಲಿರುವ ಹೊಟ್ಟು ಕಡಿಮೆಯಾಗುತ್ತದೆ.
ಮೆಹಂದಿ ಸೊಪ್ಪಿಗೆ ಮೊಸರು ಸೇರಿಸಿ ತಲೆಗೆ ಹಚ್ಚಿಕೊಳ್ಳುವುದರಿಂದ ತಲೆ ಕೂದಲು ಉದ್ದವಾಗಿ, ಸೊಂಪಾಗಿ ಬೆಳೆಯುತ್ತದೆ. ತಲೆ ತುರಿಕೆಯೂ ಇದರಿಂದ ಕಡಿಮೆಯಾಗುತ್ತದೆ.