alex Certify ʼಮೆಟ್ಟಿಲುʼ ಹತ್ತಿ ಇಳಿಯಿರಿ…… ತೂಕ ಕಡಿಮೆಯಾಗುವುದನ್ನು ನೋಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೆಟ್ಟಿಲುʼ ಹತ್ತಿ ಇಳಿಯಿರಿ…… ತೂಕ ಕಡಿಮೆಯಾಗುವುದನ್ನು ನೋಡಿ….!

ಕೆಲವರಿಗೆ ನಿತ್ಯ ವಾಕಿಂಗ್ ಮಾಡಲು ಸಾಧ್ಯವಾಗದಿರಬಹುದು. ಅಷ್ಟು ಹೊತ್ತು ಮನೆ ಬಿಡಲು ಸಾಧ್ಯವಿಲ್ಲದವರಿಗೆ ವಾಕಿಂಗ್ ಮಾಡಲು ಸ್ಥಳಾವಕಾಶದ ಕೊರತೆ ಇರುವವರಿಗೆ ಹೇಳಿ ಮಾಡಿಸಿದ ಇನ್ನೊಂದು ವ್ಯಾಯಾಮ ಎಂದರೆ ಮೆಟ್ಟಿಲು ಹತ್ತಿ ಇಳಿಯುವುದು.

ನಿತ್ಯ ಮೆಟ್ಟಿಲು ಹತ್ತಿ ಇಳಿಯುವುದು ಜಿಮ್ ಗೆ ಹೋದಷ್ಟು ಪ್ರಭಾವಶಾಲಿ ಎನ್ನುತ್ತವೆ ಕೆಲವು ಸಂಶೋಧನೆಗಳು. ನಿತ್ಯದ ಕೆಲಸಗಳ ಜೊತೆ ಮೆಟ್ಟಿಲು ಹತ್ತಿ ಇಳಿಯುವುದನ್ನೂ ನಿಮ್ಮ ಜೀವನದ ಭಾಗವಾಗಿಸಿಕೊಳ್ಳಿ, ಇದರಿಂದ ದೈಹಿಕವಾಗಿ ಸಕ್ರಿಯರಾಗಿರಲು ಸಾಧ್ಯ ಎಂಬುದನ್ನು ದೃಢಪಡಿಸಿವೆ.

ದೇಹ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ವಾಕಿಂಗ್ ಗಿಂತಲೂ ಮೆಟ್ಟಿಲು ಹತ್ತಿ ಇಳಿಯುವ ಕಾರ್ಯದಲ್ಲಿ ತೊಡಗಿಕೊಂಡರೆ ಬಹುಬೇಗ ದೇಹ ತೂಕ ಕಳೆದುಕೊಳ್ಳುತ್ತೀರಿ.

ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಸ್ನಾಯುಗಳನ್ನು ದೃಢಗೊಳಿಸುತ್ತದೆ. ಕಾಲು ನೋವು, ಗಂಟು ನೋವು ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ತೊಡೆ ಹಾಗೂ ಸೊಂಟದ ಸ್ನಾಯುಗಳು ಶಕ್ತಿ ಪಡೆಯುತ್ತವೆ.

ಮೆಟ್ಟಿಲು ಹತ್ತಿ ಇಳಿಯಲು ಬೆಳಗಿನ ಸಮಯ ಒಳ್ಳೆಯದಾದರೂ ಇತರ ಅವಧಿಗಳನ್ನೂ ಬಳಸಬಹುದು. ಕಚೇರಿಗೆ ಹೋಗುವಾಗ ಲಿಫ್ಟ್ ಬದಲು ಮೆಟ್ಟಿಲು ಬಳಸುವ ಮೂಲಕ, ಮಧ್ಯಾಹ್ನ ಊಟದ ಬಳಿಕ ಒಂದೆರಡು ಬಾರಿ ಮೆಟ್ಟಿಲು ಹತ್ತುವ ಮೂಲಕ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...