ಪ್ರತಿಯೊಂದು ತರಕಾರಿಯಲ್ಲೂ ಒಂದಲ್ಲ ಒಂದು ಪೋಷಕಾಂಶ ಇರುತ್ತದೆ. ಅದ್ರ ಸೇವನೆಯಿಂದ ಪೋಷಕಾಂಶಗಳು ನಮ್ಮ ದೇಹ ಸೇರುತ್ತವೆ. ಆರೋಗ್ಯಕ್ಕೂ ತರಕಾರಿ ಒಳ್ಳೆಯದು.
ಮೂಲಂಗಿ ಕೂಡ ತಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೊಟ್ಟೆ ಸಮಸ್ಯೆಯಿಂದ ಬಳಲುವವರು ಅವಶ್ಯಕವಾಗಿ ಮೂಲಂಗಿ ಸೇವನೆ ಮಾಡಬೇಕು.
ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಮೂಲಂಗಿಯನ್ನು ತಪ್ಪು ವಿಧಾನದಲ್ಲಿ ಸೇವನೆ ಮಾಡಿದ್ರೆ ಆರೋಗ್ಯ ವೃದ್ಧಿ ಬದಲು ಹಾನಿಯಾಗುತ್ತದೆ.
ಮೂಲಂಗಿ ಸೇವನೆ ನಂತ್ರ ಎಂದೂ ಹಾಗಲಕಾಯಿ ತಿನ್ನಬಾರದು. ಮೂಲಂಗಿ ತಿಂದ ನಂತ್ರ ಹಾಗಲಕಾಯಿ ಜ್ಯೂಸ್ ಅಥವಾ ಪಲ್ಯ ತಿಂದ್ರೆ ಹೊಟ್ಟೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಉಸಿರಾಡಲು ತೊಂದೆಯಾಗಬಹುದು. ಹೃದಯಾಘಾತದ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಮೂಲಂಗಿ ಹಾಗೂ ಹಾಗಲಕಾಯಿಯನ್ನು ಒಟ್ಟಿಗೆ ಸೇವನೆ ಮಾಡಬಾರದು. ಎರಡರ ಸೇವನೆ ಮಧ್ಯೆ 24 ಗಂಟೆ ಅಂತರವಿರಬೇಕು.
ಮೂಲಂಗಿ ತಿಂದ ಮೇಲೆ ಕಿತ್ತಳೆ ಹಣ್ಣು ಸೇವನೆ ಕೂಡ ಒಳ್ಳೆಯದಲ್ಲ. ಮೂಲಂಗಿ ನಂತ್ರ ಕಿತ್ತಳೆ ಹಣ್ಣು ತಿಂದ್ರೆ ಎರಡೂ ಹೊಟ್ಟೆ ಸೇರಿ ವಿಷವಾಗುತ್ತದೆ. ಹೊಟ್ಟೆ ನೋವಿನ ಸಮಸ್ಯೆ ಹೆಚ್ಚಾಗಲು ಇದು ಕಾರಣವಾಗುತ್ತದೆ.