alex Certify ʼಮುಖ್ಯ ದ್ವಾರʼದ ಮುಂದೆ ನಾಮ ಫಲಕ ಅಳವಡಿಸುವ ಮುನ್ನ ಇದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮುಖ್ಯ ದ್ವಾರʼದ ಮುಂದೆ ನಾಮ ಫಲಕ ಅಳವಡಿಸುವ ಮುನ್ನ ಇದು ತಿಳಿದಿರಲಿ

ಮನೆಯ ಮುಖ್ಯ ದ್ವಾರಕ್ಕೆ ನಾಮ ಫಲಕ ಹಾಕುವುದು ಸಾಮಾನ್ಯ ಸಂಗತಿ. ನಾಮ ಫಲಕ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮನೆಯ ಮುಖ್ಯ ದ್ವಾರಕ್ಕೆ ನಾಮ ಫಲಕವನ್ನು ವಾಸ್ತು ಪ್ರಕಾರ ಹಾಕಬೇಕು. ವಾಸ್ತು ಪ್ರಕಾರ ನಾಮ ಫಲಕ ಹಾಕಿದ್ರೆ ಶುಭ ಫಲ ಪ್ರಾಪ್ತಿಯಾಗುತ್ತದೆ.

ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ನಾಮ ಫಲಕ ನೆರವಾಗುತ್ತದೆ. ವಾಸ್ತು ಶಾಸ್ತ್ರಕ್ಕೆ ವಿರುದ್ಧವಾಗಿ ನಾಮ ಫಲಕ ಹಾಕಿದ್ರೆ ಸಮಸ್ಯೆ ಎದುರಾಗಬಹುದು. ನಕಾರಾತ್ಮಕ ಶಕ್ತಿಯ ಪ್ರವೇಶವಾಗಬಹುದು.

ಮನೆಯ ಮುಖ್ಯ ದ್ವಾರದ ಎಡಭಾಗಕ್ಕೆ ನಾಮಫಲಕ ಹಾಕಬೇಕು. ಅಗತ್ಯಕ್ಕೆ ತಕ್ಕಂತೆ ಬೇರೆ ಕಡೆ ಹಾಕಬಹುದು. ಆದ್ರೆ ಮುಖ್ಯ ದ್ವಾರದಿಂದ ಸ್ವಲ್ಪ ಎತ್ತರದಲ್ಲಿ ನಾಮ ಫಲಕವಿರಬೇಕು.

ನಾಮ ಫಲಕದ ಆಕಾರ ವೃತ್ತಾಕಾರ,ತ್ರಿ ಕೋನದಲ್ಲಿರಬೇಕು. ಇದು ಶುಭ ಫಲಗಳನ್ನು ನೀಡುತ್ತದೆ. ಹಾಗೆ ನಾಮ ಫಲಕ ಗಟ್ಟಿಯಾಗಿರಬೇಕು. ತೂಗಾಡುತ್ತಿರಬಾರದು.

ನಾಮಫಲಕದ ಮುಂದೆ ಎಲೆಕ್ಟ್ರಾನಿಕ್ ವಸ್ತು ಅಥವಾ ಸ್ವಚ್ಛತೆ ಮಾಡುವ ವಸ್ತುಗಳು ಇರಬಾರದು. ಇದು ನಷ್ಟಕ್ಕೆ ಕಾರಣವಾಗುತ್ತದೆ.

ನಾಮ ಫಲಕದಲ್ಲಿ ಪ್ರಾಣಿ, ಪಕ್ಷಿಗಳ ಚಿತ್ರವಿರಬಾರದು. ಅದು ದುರಾದೃಷ್ಟಕ್ಕೆ ಕಾರಣವಾಗುತ್ತದೆ. ಹಾಗೆ ನಾಮ ಫಲಕದಲ್ಲಿ ರಂದ್ರಗಳಿರಬಾರದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...