ಈ ವರ್ಷ ಜುಲೈನಿಂದ ಸೆಪ್ಟೆಂಬರ್ ತಿಂಗಳ ನಡುವೆ ಸಾಮಾನ್ಯ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಮುನ್ಸೂಚನೆ ನೀಡಿದೆ.
ಸಾಮಾನ್ಯ ಮಳೆಯು ದೀರ್ಘಾವಧಿಯ ಸರಾಸರಿ 96 ರಿಂದ 104 ಪ್ರತಿಶತದಷ್ಟಿರುತ್ತದೆ. ಐಎಂಡಿ 2022ರ ನೈಋತ್ಯ ಮಾನ್ಸೂನ್ ಋತುವಿನ ಮಳೆಯ ಮೊದಲ ಹಂತದ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ.
ನೈಋತ್ಯ ಮಾನ್ಸೂನ್ ಕಾಲೋಚಿತ (ಜುಲೈನಿಂದ ಸೆಪ್ಟೆಂಬರ್) ಒಟ್ಟಾರೆಯಾಗಿ ದೇಶದಾದ್ಯಂತ ಮಳೆಯು ಸಾಮಾನ್ಯವಾಗಿರಬಹುದು. ಇದು ದೀರ್ಘಾವಧಿ ಸರಾಸರಿ 96 ರಿಂದ 104 ಪ್ರತಿಶತದಷ್ಟು ಇರುತ್ತದೆ. 1971-2020ರ ಅವಧಿಯಲ್ಲಿ ಒಟ್ಟಾರೆಯಾಗಿ ದೇಶದಾದ್ಯಂತ ಋತುಮಾನದ ಮಳೆಯ ಎಲ್ ಪಿ ಎ 87 ಸೆಂ.ಮೀ. ಆಗಿದೆ ಎಂದು ಐಎಂಡಿ ಹೇಳಿದೆ.
ಇತ್ತೀಚಿನ ಮಾನ್ಸೂನ್ ಮಿಷನ್ ಹವಾಮಾನ ಮುನ್ಸೂಚನೆ ವ್ಯವಸ್ಥೆ, ಹಾಗೆಯೇ ಇತರ ಹವಾಮಾನ ಮಾದರಿ ಮುನ್ಸೂಚನೆಗಳು ಮುಂತಾದವು ಮಾನ್ಸೂನ್ ಋತುವಿನಲ್ಲಿ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಐಎಂಡಿ ಮೇ 2022ರ ಕೊನೆಯ ವಾರದಲ್ಲಿ ಮಾನ್ಸೂನ್ ಋತುವಿನ ಮಳೆಯ ನವೀಕರಿಸಿದ ಮುನ್ಸೂಚನೆಗಳನ್ನು ನೀಡುತ್ತದೆ.